ಮಾಲೀಕನನ್ನು ಹುಡುಕಿದ ಶ್ವಾನ

Dog
Published on

ಚಿಕ್ಕಮಗಳೂರು: ಬುಧವಾರ ಆಲ್ದೂರು ಸಮೀಪದ ವಸ್ತಾರೆ ಕೆರೆಯಲ್ಲಿ ಪ್ರಾಣ ಕಳೆದುಕೊಂಡ ಸಂದೀಪ್ ಗ್ರಾಮದ ಮಹೇಶ್ ಅವರ ಏಕೈಕ ಪುತ್ರ.

ಆತ ಪ್ರೀತಿಯಿಂದ ಸಾಕಿ ಸಲಹಿದ ನಾಯಿ ಮಧ್ಯಾಹ್ನದಿಂದ ಕೆರೆಯ ಪಕ್ಕದಲ್ಲೇ ಸುಳಿದಾಡುತ್ತಿದ್ದು ತನ್ನ ಪ್ರೀತಿಯ ಮಾಲೀಕನನ್ನು ಹುಡುಕಾಡಿತು. ಕೊನೆಗೆ ಆತನ ಶವವನ್ನು ಹೊರತೆಗೆದು ಅಂಬ್ಯುಲೆನ್ಸ್‍ನಲ್ಲಿ ಸಾಗಿಸುವ ಸಂದರ್ಭ ವಾಹನವನ್ನು ಹಿಂಬಾಲಿಸಿ ಓಡಿದ ದೃಶ್ಯ ಕರುಣಾಜನಕವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net