

ಅಳವಂಡಿ: ನಂಬಿಕೆ, ಸೇವಾ ಮನೋಭಾವದಿಂದ ಗ್ರಾಮದ ಅಭಿವೃದ್ಧ್ದಿಗೆ ಶ್ರಮಿಸಿದಾಗಲೇ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ತಾಪಂ ಸದಸ್ಯ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ ತಿಳಿಸಿದರು.
ಗ್ರಾಮದ ಗ್ರಾಪಂ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾರಮ್ಮ ಇಳಿಗೇರರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು. ಗ್ರಾಮದ ಮೂಲಭೂತ ಸಮಸ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ.
ಹಾಗೂ ಸೌಕರ್ಯಗಳನ್ನು ಕಲ್ಪಿಸುವ ಜತೆಗೆ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರ ಸಹಕಾರ ಪಡೆದು ಅಭಿವೃದ್ಧಿಗೊಳಿಸಬೇಕು. ಪಕ್ಷಬೇಧ ಮರೆತು ಗ್ರಾಮ ಅಭಿವೃದ್ಧಿ ಮಾಡಿ ಎಂದರು.
ಗ್ರಾಪಂ ಸದಸ್ಯರಾದ ಅನ್ವರ ಗಡಾದ, ಹನುಮಂತ ಮೋರನಾಳ, ಹನುಮಂತ ಮೂಲಿಮನಿ, ವಿಶ್ವನಾಥ ದೋತರಗಾವಿ, ರೇಣುಕಪ್ಪ ಹಳ್ಳಿಕೇರಿ, ನಾಗರಾಜ ನವನಳ್ಳಿ ಇದ್ದರು.