

ಮುನವಳ್ಳಿ: ಜಾತ್ರೆ, ಉತ್ಸವ ನಾಡಿನ ಪರಂಪರೆಯ ಪ್ರತಿಕವಾಗಿವೆ. ಹೀಗಾಗಿ, ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಾತ್ರಾ ಉತ್ಸವ ಸಮಿತಿ ಅಧ್ಯ ಅಂಬರೀಷ ಯಲಿಗಾರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಾತ್ರಾ ನಿಮಿತ್ತ ಐದು ದಿನಗಳವರೆಗೆ ಏರ್ಪಡಿಸಿದ್ದ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಪನ್ನಗೊಂಡವು. ತೆರೆಬಂಡಿ ಸ್ಪರ್ಧೆ, ಜಾನಪದ ಸಮೂಹ ನೃತ್ಯ, ನಮ್ಮಮ್ಮ ಸೂಪರ ಸ್ಟಾರ್ ಸ್ಪರ್ಧೆ, ರಾಜ್ಯಮಟ್ಟದ ಖೋ&ಖೋ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ, ಆಟೋಟ ಸ್ಪರ್ಧೆ, ಟ್ರ್ಯಾಕ್ಟರ್ ಇಂಜಿನ ಜಗ್ಗುವ ಸ್ಪರ್ಧೆ, ಟ್ರ್ಯಾಕ್ಟರ್ ಜಿಗ್ಜಾಗ್ ಸ್ಪರ್ಧೆ, ಬಯಲು ಕುಸ್ತಿ, ಜಾನುವಾರು ಪ್ರದರ್ಶನ ಹಾಗೂ ಸಾಮಾಜಿಕ ನಾಟಕ ಗಮನ ಸೆಳೆದವು.
ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ, ಜಾತ್ರಾ ಸಮಿತಿ ಸದಸ್ಯರಾದ ಅರುಣಗೌಡ ಪಾಟೀಲ, ಪ್ರಕಾಶ ಕಾಮಣ್ಣವರ, ನಾಗಪ್ಪ ಕಾಮಣ್ಣವರ, ಮೌನೇಶ ಬಡಿಗೇರ, ವಿಠ್ಠಲ ನಲಗೆ, ಕಲ್ಲಪ್ಪ ಕಿತ್ತೂರ, ಎಸ್.ಬಿ.ಹಿರಲಿಂಗನ್ನವರ, ಚಂದ್ರು ಹೋಳಿಮಠ, ಪ್ರಭು ಹನಸಿ, ಸಿಂಗಯ್ಯ ಹಿರೇಮಠ, ಸುರೇಶ ಜಂಬ್ರಿ, ಬಸವರಾಜ ಚುಳಕಿ, ಮಲ್ಲಿಕಾರ್ಜುನ ರಡರಟ್ಟಿ, ರಾಜಪ್ಪ ಚಂದರಗಿ, ಅಶೋಕ ಗೋಮಾಡಿ, ಎಂ.ಎ.ಕಮತಗಿ, ಉಮೇಶ ಹಿರಲಿಂಗನ್ನವರ, ಅಜ್ಜು ಹಿರಲಿಂಗನ್ನವರ, ಅಶೋಕ ರಡರಟ್ಟಿ, ಬಾಳು ಹೊಸಮನಿ, ಮಹೇಶ ಯಲಿಗಾರ, ಪ್ರಶಾಂತ ಶಿವಪೇಟಿ, ವೀರಯ್ಯಶಾಸ್ತ್ರಿ ಹೊರಕೇರಿಮಠ ಇತರರಿದ್ದರು.