ಸಂಬಂಧಗಳನ್ನು ಗಟ್ಟಿಗೊಳಿಸುವ ಜಾತ್ರೆ, ಉತ್ಸವಗಳು

14 nrp 1
ಎನ್.ಆರ್.ಪುರದ ಶ್ರೀ ಅಂತರಘಟ್ಟಮ್ಮ ದೇವಿ ಉತ್ಸವಕ್ಕೆ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಚಾಲನೆ ನೀಡಿದರು. ಪ್ರಶಾಂತ್.ಎಲ್.ಶೆಟ್ಟಿ, ಪ್ರವೀಣ್, ಕೆ.ಅಣ್ಣಪ್ಪ, ಸೋಮಶೇಖರ್ ಇದ್ದರು.
Published on

ಎನ್.ಆರ್.ಪುರ: ಜಾತ್ರೆ, ಉತ್ಸವಗಳು ಮನುಷ್ಯರ ನಡುವಿನ ಪ್ರೀತಿ, ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಪ್ರವಾಸೋದ್ಯಮ ನಿಗದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಮೇದರ ಬೀದಿ ಶ್ರೀ ಅಂತರಘಟ್ಟಮ್ಮ ದೇವಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜಾತ್ರಾ ಮಹೋತ್ಸವಗಳಲ್ಲಿ ಮೇದರಬೀದಿ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರೋತ್ಸವ ಪ್ರಮುಖವಾಗಿದೆ. ಇಲ್ಲಿ ಪೂರ್ವಿಕರು ನಡೆದುಕೊಂಡ ಬಂದ ಹಾದಿಯಲ್ಲಿ ಮೇದರ ಜನಾಂಗದ ಯುವ ಪೀಳಿಗೆ ಸಾಗುತ್ತಿರುವುದು ಶ್ಲಾಘನೀಯ. ಜಾತ್ರೋತ್ಸವದಲ್ಲಿ ಭಕ್ತಿ, ಭಾವಗಳೊಂದಿಗೆ ಜಾನಪದ ಕಲೆಗಳನ್ನು ಮೇಳೈಸುವಂತೆ ಮಾಡಿದ್ದಾರೆ. ವೀರಗಾಸೆ, ತಮಟೆ, ಚೋಮನಕುಣಿತ ವಿಶೇಷವಾಗಿವೆ ಎಂದರು.
ನಾನು ಮತ್ತು ಶಾಸಕ ಟಿ.ಡಿ.ರಾಜೇಗೌಡರು ಮೇದರ ಬೀದಿಯ ಶ್ರೀ ಅಂತರಘಟ್ಟಮ್ಮ ದೇವಿ ಸಮುದಾಯ ಭವನಕ್ಕೆ ಅನುದಾನ ತಂದು ಕೊಡಲು ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು. ಈ ಬೀದಿ ಹಾಗೂ ದೇವಸ್ಥಾನ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಎಂ.ಶ್ರೀನಿವಾಸ್ ಅವರು ಬೇರೆ, ಬೇರೆ ಜಿಲ್ಲೆಯ ತಮ್ಮ ಆಪ್ತ ಶಾಸಕರ ಬಳಗದಿಂದ ಅಂತರಘಟ್ಟಮ್ಮ ದೇವಿ ಸಮುದಾಯ ಭವನವಕ್ಕೆ 50 ಲಕ್ಷ ರೂ. ಕೊಡಿಸಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡರೂ ಕೂಡ ಅನುದಾನ ನೀಡಿದ್ದಾರೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಪ್ರವೀಣ್, ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಕೆ.ಶ್ರೀನಾಥ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಶರತ್, ನಾಗರಾಜು, ಪ್ರಜ್ವಲ್, ವಸಂತ, ರಂಗಪ್ಪ, ಚಂದ್ರಶೇಖರ್, ಸತೀಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net