25ರಂದು ಸಂತೆ,ಜಾತ್ರೆ,ಉತ್ಸವ ನಿಷೇಧ

CTD 4 DC-05
Published on

ಚಿತ್ರದುರ್ಗ: ಜಿಲ್ಲೆಯ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸ್ಥಾನಗಳಿಗೆ ಫೆ.25ರಂದು ನಡೆಯಲಿರುವ ಉಪ ಚುನಾವಣೆ ಅಂಗ ವಾಗಿ ಆಯಾ ಗ್ರಾಪಂ ಕ್ಷೇತ್ರ ವ್ಯಾಪ್ತಿಯ ಸಂತೆ,ಜಾತ್ರೆ ಮತ್ತು ಉತ್ಸವ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಆದೇಶಿಸಿದ್ದಾರೆ.

ಚಿತ್ರದುರ್ಗ ತಾಲೂಕು ಕಾಲ್ಗೆರೆ,ಹೊಳಲ್ಕೆರೆ ತಾಲೂಕು ಹಿರೇಎಮ್ಮಿಗನೂರು ಗ್ರಾಪಂನಲ್ಲಿ ಖಾಲಿ ಇದ್ದ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ.ಉಳಿದ ಚಳ್ಳಕೆರೆ ತಾಲೂಕು ನೆಲಗೇತನಹಟ್ಟಿ ಗ್ರಾಪಂ-1,ಚಿತ್ರದುರ್ಗ ತಾಲೂಕು ಯಳಗೋಡು ಗ್ರಾಪಂ-1 ಹಾಗೂ ಜಂಪಣ್ಣ ನಾಯಕನಕೋಟೆ ಗ್ರಾಪಂ 1 ಸದಸ್ಯ ಸ್ಥಾನ ಸೇರಿ 3 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಮದ್ಯ ಮಾರಾಟ ನಿಷೇಧ

ಚುನಾವಣೆ ಮುಕ್ತ,ಶಾಂತಿಯುತ,ನಿಷ್ಪಕ್ಷಪಾತ ಹಾಗೂ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ನೀತಿ ಸಂಹಿತೆ ಜಾರಿಯ ಲ್ಲಿರುವ ಪ್ರದೇಶಗಳಲ್ಲಿ ಫೆ.23ರ ಬೆಳಗ್ಗೆ 5ರಿಂದ 25ರ ಸಂಜೆ 5 ರವರೆಗೆ ುದ್ಯದ ಅಂಗಡಿ ಮುಚ್ಚಲು,ಮದ್ಯ ಸಾಗಾಣಿಕೆ,ಶೇಖರಣೆ ಮತ್ತು ಮಾರಾಟವನ್ನು ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net