

ಕೋ.ಶಿವಾಪುರ: ಯಾವುದೇ ವ್ಯಕ್ತಿ ನ್ಯಾಯಯುತವಾಗಿ ಸಂಪತ್ತು ಗಳಿಸಬೇಕು. ನ್ಯಾಯಯುತವಾಗಿ ಗಳಿಸಿದ್ದು ಮಾತ್ರ ಶಾಶ್ವತವಾಗಿರುತ್ತದೆಯೇ ಹೊರತು ಅನ್ಯಾಯದಿಂದ ಬಂದದ್ದಲ್ಲ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಅವರು ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿದ್ದ ಮಾತನಾಡಿ, 84 ಲ ಜೀವರಾಶಿಗಳಲ್ಲಿ ಮಾನವ ಜನ್ಮವೇ ದೊಡ್ಡದು. ಇಂತಹ ಮಹಾಜನ್ಮ ಪಡೆದ ಮಾನವರು ಸದಾ ಧರ್ಮ, ಸಮಾನತೆಗೆ ಹೆಚ್ಚು ಆದ್ಯತೆ ನೀಡಿ, ಸಮಾಜದ ಅಭಿವದ್ಧಿಗೆ ಶ್ರಮಿಸಬೇಕು. ಪ್ರತಿಯೊಬ್ಬರು ಧರ್ಮದ ಸೂತ್ರಗಳಂತೆ ನಡೆದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮೆರವಣಿಗೆ: ಇದಕ್ಕೂ ಮೊದಲು ಗ್ರಾಮದ ಬೀದಿಗಳಲ್ಲಿ ಹೂವುಗಳಿಂದ ಅಲಂಕತಗೊಂಡ ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವವು ವೀರಗಾಸೆ ನತ್ಯ, ಡೊಳ್ಳು ಕುಣಿತ, ಭಜನಾ ಮೇಳ, ಸುಮಂಗಲೆಯರಿಂದ ಸಾವಿರದ ಎಂಟು ಕುಂಭಮೇಳ ಹಾಗೂ ಸಕಲ ಮಂಗಳ ವಾದ್ಯಗಳೊಂದಿಗೆ ನಡೆಯಿತು.
ಭಾಗೋಜಿಕೊಪ್ಪ ಡಾ. ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ, ಹರ್ಲಾಪುರ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮೊರಬದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂತೂರ ಬೆಂತೂರ ಕುಮಾರ ದೇವರು, ಚರಂತೇಶ್ವರ ದೇವರು, ಬಸಯ್ಯ ಹಿರೇಮಠ, ಮಹಾದೇವಪ್ಪ ಗಡ್ಡಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಡಾ. ಕೆ.ವಿ.ಪಾಟೀಲ, ಪುಂಡಲೀಕ ಮೇಟಿ, ಮಹಾಂತೇಶ ತೋಟಗಿ, ಶಿಂಗಯ್ಯ ಮಠಪತಿ, ರಮೇಶ ಅರಬಾಟ, ಮಲಕಾಜ ಅಂಗಡಿ, ಜಗದೀಶ ಕೌಜಲಗಿ, ಚನ್ನಪ್ಪ ಬೆಣಚಮರಡಿ, ಶಿವಾನಂದ ಕಟ್ಟಿಮನಿ, ಶಿವಾನಂದ ಹಾದಿಮನಿ, ಅಶೋಕ ಹುಂಡೇಕಾರ, ಮಹಾದೇವ ವನ್ನೂರ, ಸಿದ್ದಪ್ಪ ಶಿಂಗನ್ನವರ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.