

ತೇರದಾಳ: ಪಟ್ಟಣದ ಶ್ರೀ ಸಿದ್ಧೇಶ್ವರ ದೇವರ ಹಾಗೂ ಕಿಲ್ಲಾ ಭಾಗದಲ್ಲಿರವ ಪ್ರಭುದೇವರ ಮೂಲ ಗದ್ದುಗೆ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಜಾತ್ರೆ ನಿಮಿತ್ತ ಸಿದ್ಧೇಶ್ವರ ಮೂರ್ತಿ ಹಾಗೂ ಮೂಲ ಗದ್ದುಗೆಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.
ಸಿದ್ಧೇಶ್ವರ ದೇವಸ್ಥಾನದಲ್ಲಿ ಡೊಳ್ಳಿನ ಪೆಟ್ಟು ಹಾಗೂ ಹಾಡುಗಳ ಸೇವೆ ಸಾರ್ವಜನಿಕರ ಗಮನಸೆಳೆಯಿತು. ಮಧ್ಯಾಹ್ನ ಉಭಯ ಕಡೆಗಳಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಮಾತ್ರವಲ್ಲದೆ ಸುತ್ತಲಿನ ಗ್ರಾಮಗಳ ಭಕ್ತರು ಎರಡು ಕಡೆಗೆ ದರ್ಶನ ಪಡೆದು ಪುಣಿತರಾದರು.