ಜಾತ್ರಾ ಮಹೋತ್ಸವದ ಪ್ರಚಾರ ಪತ್ರಿಕೆ ಬಿಡುಗಡೆ

20-msk-1
ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಜಾತ್ರಾಮಹೋತ್ಸವದ ಪ್ರಚಾರ ಪತ್ರಿಕೆಯನ್ನು ಭಕ್ತರು ಬಿಡುಗಡೆ ಮಾಡಿದರು.ಗ್ರಾ.ಪಂ.ಅಧ್ಯಕ್ಷ ಲಿಂಗಪ್ಪ ನಾಗರಬೆಂಚಿ, ಗ್ರಾ.ಪಂ.ಉಪಾಧ್ಯಕ್ಷರು ಸುಜಾತ ರಾಮಣ್ಣ, ಬಸವರಾಜ ಗುಂಡಳ್ಳಿ, ಶಿವಪುತ್ರಯ್ಯ ಸ್ವಾಮಿ ಮಲ್ಲಪ್ಪ ಗುರಿಕಾರ, ಅಮರೇಶ ಗುಂಡಳ್ಳಿ, ಗೋಪಾಲ ಪೂಜಾರಿ, ಪರಡ್ಡಿ ರಾಜಣ್ಣ, ಹನುಮಂತಪ್ಪ ಹಾಗೂ ಇತರರಿದ್ದರು.
Published on

ಮಸ್ಕಿ: ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ 2024.ಜ.3ರಂದು ಸುವರ್ಣಗಿರಿ ವಿರಕ್ತಮಠದ ಲಿಂ.ಚನ್ನಮಲ್ಲ ಶಿವಯೋಗಿಗಳ 68ನೇ ಜಾತ್ರಾಮಹೋತ್ಸವ ಹಾಗೂ ನೂತನ ಶಿಲಾಮಂಟಪ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹಗಳು ಜರುಗಲಿವೆ ಎಂದು ಸುವರ್ಣಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಮಠದ ಆವರಣದಲ್ಲಿ ಭಾನುವಾರ ಭಕ್ತರಿಂದ ಜಾತ್ರಾ ಮಹೋತ್ಸವದ ಪ್ರಚಾರ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಭಕ್ತರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ 60 ಲಕ್ಷ ರೂ.ವೆಚ್ಚದಲ್ಲಿ ಚನ್ನಮಲ್ಲ ಶಿವಯೋಗಿಗಳ ಶಿಲಾ ಮಂಟಪ ನಿರ್ಮಾಣ ಮಾಡಲಾಗಿದೆ.

ನೂತನ ರಥ ಚಾಲನೆಗೊಳಿಸಲಾಗುತ್ತದೆ ಮತ್ತು ತುಲಾಭಾರ, ಗ್ರಂಥ ಬಿಡುಗಡೆ ಪ್ರವಚನ ಕಾರ್ಯಕ್ರಮ ನಡೆಯಲಿವೆ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಾಮೂಹಿಕ ವಿವಾಹಕ್ಕೆ ಹೆಸರು ನೊಂದಣಿ ಮಾಡಿಸುವವರು ರಾಜಣ್ಣ ಪರಡಿ - 988001510 ಮತ್ತು ಲಕ್ಷ್ಮೀಕಾಂತ ಇಳಿಗೇರ-9900841029 ಇವರನ್ನು ಸಂಪರ್ಕಿಸಿ.

ಗ್ರಾ.ಪಂ.ಅಧ್ಯಕ್ಷ ಲಿಂಗಪ್ಪ ನಾಗರಬೆಂಚಿ, ಗ್ರಾ.ಪಂ.ಉಪಾಧ್ಯಕ್ಷರು ಸುಜಾತ ರಾಮಣ್ಣ, ಬಸವರಾಜ ಗುಂಡಳ್ಳಿ, ಶಿವಪುತ್ರಯ್ಯ ಸ್ವಾಮಿ ಮಲ್ಲಪ್ಪ ಗುರಿಕಾರ, ಅಮರೇಶ ಗುಂಡಳ್ಳಿ, ಗೋಪಾಲ ಪೂಜಾರಿ, ಪರಡ್ಡಿ ರಾಜಣ್ಣ, ಹನುಮಂತಪ್ಪ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net