ಮೇ 31ರವರೆಗೆ ಜಾತ್ರೆ, ರಥೋತ್ಸವ ನಿಷೇಧ; ಎರಡು ದಿನ ಮುಂಚೆ ದೇವಸ್ಥಾನ ಬಂದ್: ಬಳ್ಳಾರಿ ಡಿಸಿ ಮಾಲಪಾಟಿ ಆದೇಶ

Ballari DC Pavan Kumar Malapati
ಬಳ್ಳಾರಿ ಡಿಸಿ ಪವನಕುಮಾರ್ ಮಾಲಪಾಟಿ.
Published on

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಸಾರ್ವಜನಿಕರ ಮತ್ತು ಭಕ್ತರ ಆರೋಗ್ಯ ದೃಷ್ಟಿಯಿಂದ ಮೇ 31ರವರೆಗೆ ರಥೋತ್ಸವ, ಜಾತ್ರೋತ್ಸವ, ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಮೇ 27ರವರೆಗೆ ವಿವಿಧ ದೇವಸ್ಥಾನಗಳಲ್ಲಿ ರಥೋತ್ಸವ, ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಎರಡು ದಿನಗಳ ಹಿಂದೆ ಹಾಗೂ ಎರಡು ದಿನಗಳ ನಂತರ ದೇವಸ್ಥಾನವನ್ನು ಮುಚ್ಚಲು ಸಂಬಂಧಪಟ್ಟ ದೇವಾಲಯಗಳ ಉಸ್ತುವಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net