ಕೃಷಿ ವಿವಿಯಲ್ಲಿ ನಾಳೆಯಿಂದ ಮೇಳ

Fair at Agricultural University from tomorrow
Published on

ಹುನಗುಂದ:ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.13 ರಿಂದ 16 ರವರೆಗೆ ನಾಲ್ಕು ದಿನ ಕೃಷಿ ಮೇಳ ಆಯೋಜಿಸಲಾಗಿದೆ. ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯ ಸಂಜೀವ ಜೋಶಿ ಹೇಳಿದರು.ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಕೃಷಿ ಮೇಳದ ಭಿತ್ತಿಪತ್ರವನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೃಷಿ ಮೇಳದಲ್ಲಿ ಬೀಜ ಪ್ರದರ್ಶನ, ಸಾಂಪ್ರದಾಯಿಕ ತಳಿಗಳು, ಪರಿಸರ, ನೈಸರ್ಗಿಕ ಮತ್ತು ಸಾವಯವ ಕೃಷಿ ಬಗ್ಗೆ ಮಾಹಿತಿ, ಕೃಷಿ ತರೊಂದಿಗೆ ಸಮಾಲೋಚನೆ, ಕೃಷಿ ನವೋದ್ಯಮಗಳು, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಕೀಟಗಳ ನಿರ್ವಹಣೆ, ತೋಟಗಾರಿಕೆ, ಲ& ಪುಷ್ಪ್ಪ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಸುಧಾರಿತ ಕೃಷಿ ಉಪಕರಣ, ಕಿಸಾನ್​ ಡ್ರೋನ್​ ಬಳಕೆ, ರೈತರ ಆವಿಷ್ಕಾರಗಳು, ಕೃಷಿ, ಅರಣ್ಯ, ಪಶು ಸಂಗೋಪನೆ, ಜಾನುವಾರು ಪ್ರದರ್ಶನ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೃಷಿ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಬಸವರಾಜ ಟಕ್ಕಳಕಿ ಮಾತನಾಡಿ, ಕೃಷಿಮೇಳದಿಂದ ರೈತರಿಗೆ ಅನುಕೂಲವಾಗಲಿದೆ. ಹುನಗುಂದ ಮತ್ತು ಇಳಕಲ್ಲ ತಾಲೂಕಿನ ರೆತರಿಗೆ ಇಲಾಖೆ ವತಿಯಿಂದ ಒಂದು ಬಸ್​ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜಾಲಿಹಾಳ, ಖಜಾಂಚಿ ಬಸವರಾಜ ಹೊಸಮನಿ, ಜಿಲ್ಲಾ ಪ್ರತಿನಿಧಿ ಪ್ರಭು ಇದ್ದಲಗಿ, ಸದಸ್ಯರಾದ ಸಂಗಪ್ಪ ಹೂಲಗೇರಿ, ಗದಿಗೆಪ್ಪ ರಾಘಾಪುರ, ಸಂಗಪ್ಪ ಗೋಲಪ್ಪನವರ, ಸಂಗಪ್ಪ ಕೆಂಗಲ್​, ಪಾಪಣ್ಣ ಬಾಲರಡ್ಡಿ ಇದ್ದರು.

ಹುನಗುಂದ ಕೃಷಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು ಕೃಷಿ ಮೇಳದ ಭಿತ್ತಿಪತ್ರ ಬಿಡುಗಡೆ ಮಾಡಿದರು. ಸಂಜೀವ ಜೋಶಿ, ಕೃಷ್ಣ ಜಾಲಿಹಾಳ, ಖಜಾಂಚಿ ಬಸವರಾಜ ಹೊಸಮನಿ, ಜಿಲ್ಲಾ ಪ್ರತಿನಿಧಿ ಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net