ದೇವಾಲಯದ ಆಸ್ತಿ ಸಂರಕ್ಷಣೆ ಮಾಡುವಲ್ಲಿ ವಿಫಲ: ಅಧಿಕಾರಿಗಳ ವಿರುದ್ಧ ರೈತ ಮುಖಂಡ ಅಸಮಾಧಾನ

kiranguru papu3
Published on

ಮಂಡ್ಯ: ಸರ್ಕಾರಿ ಭೂಮಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಗಳನ್ನು ಕಂದಾಯ ಇಲಾಖೆ ಸಂರಕ್ಷಣ ಕಾಯ್ದೆಯಡಿ ಸಂರಕ್ಷಿಸಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ರೈತ ಸಂಘದ ಮುಖಂಡ ಮೋಹನ್‌ಕುಮಾರ್ ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹಾಗೂ ದೇವಾಲಯಗಳ ಭೂಮಿಗಳನ್ನು ಗ್ರಾಮಮಟ್ಟದಲ್ಲಿ ಗುರುತಿಸಿ, ಸಂರಕ್ಷಿಸಿ ಸರ್ಕಾರಿ ಕಟ್ಟಡ, ಶಾಲೆ, ಅಂಗನವಾಡಿ, ಡೇರಿ, ಅಂಚೆ ಕಚೇರಿ, ನಾಡಕಚೇರಿ, ಗ್ರಂಥಾಲಯ, ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಹಂಚಿಕೆಯಾಗಬೇಕಿತ್ತು. ಆದರೆ ಪ್ರಸ್ತುತ ಭೂಮಿಯನ್ನು ಉಳ್ಳವರ, ಪಟ್ಟಭದ್ರ ಹಿತಾಸಕ್ತಿಗಳ, ಬಲಾಢ್ಯರ ಪಾಲಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ಭೂಮಿಗಳಿದ್ದರೂ ಹಲವು ಗ್ರಾಮ ಮತ್ತು  ನಗರ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆಯಲ್ಲೇ ಇವೆ. ಸಾರ್ವಜನಿಕ ತೆರಿಗೆ ಹಣದಿಂದ ಬಾಡಿಗೆ ಕಟ್ಟುತ್ತಿರುವ ಸರ್ಕಾರ, ಸರ್ಕಾರಿ ಭೂಮಿಗಳಿದ್ದರೂ ಕಟ್ಟಡಗಳನ್ನು ಕಟ್ಟದೆ ಬಾಡಿಗೆಯಲ್ಲೇ ಕಚೇರಿಗಳನ್ನು ಕಮೀಷನ್ ಆಸೆಗೆ ಮುಂದುವರಿಸಿಕೊಂಡು ಮೌನ ವಹಿಸುತ್ತಿರುವ ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net