ಜೀವನದಲ್ಲಿ ಹೆಚ್ಚು ಪಾಠ ಕಲಿಸುವ ಸೋಲು

6-BNK-1- Bharath bommai
Published on

ಬಂಕಾಪುರ: ಕ್ರೀಡೆ ಸದೃಢ ದೇಹದ ಜತೆಗೆ ಮನಸಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಹೇಳಿದರು.

ಸಮೀಪದ ಬಾಡ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಬಂಕನಾಥೇಶ್ವರ ಕಬಡ್ಡಿ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸೋಲು- ಗೆಲುವು ಇದ್ದೇ ಇರುತ್ತದೆ. ಸೋಲು ಜೀವನದಲ್ಲಿ ಅತಿ ಹೆಚ್ಚು ಪಾಠ ಕಲಿಸುತ್ತದೆ. ನಾವು ಸೊತಿದ್ದೇವೆ ಎಂದು ನಿರಾಸೆಯಾಗದೇ ಒಂದು ದಿನ ನಾವು ಗೆದ್ದೆ ಗೆಲ್ಲುತ್ತೇವೆ ಎನ್ನುವ ಆಶಾವಾದ ಇಟ್ಟುಕೊಳ್ಳಬೇಕು. ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ ಎಂದರು.

ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಹಾನಗಲ್ ತಾಲೂಕಿನ ಮೈನಲಿ ತಂಡ ಪ್ರಥಮ, ಬಾಡ ಗ್ರಾಮದ ತಂಡ ದ್ವಿತೀಯ, ಹಳೇ ಬಂಕಾಪುರ ತಂಡ ತೃತೀಯ ಸ್ಥಾನ ಪಡೆದುಕೊಂಡವು. ವಿಜೇತರಿಗೆ ಪಾರಿತೋಷಕ ಜತೆ ನಗದು ಬಹುಮಾನ ವಿತರಿಸಲಾಯಿತು.

ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ, ಜಿ.ಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಕಾಶಿನಾಥ ಕಳ್ಳಿಮನಿ, ಶಿವಾನಂದ ಬಿಳೆಕುದರಿ, ಶಿವರಾಜ ಪೂಜಾರ, ಮಾಲತೇಶ ಕಮ್ಮಾರ, ಕುಮಾರ ಬಿದರಗಡ್ಡಿ, ಲಕ್ಷ್ಮಣ ತೊಂಡುರ, ಈಶ್ವರ ಚಿನ್ನಪ್ಪನವರ, ಮುರಗೇಶ ಪುಟ್ಟಪ್ಪನವರ, ಚೇತನ ಬಾರಿಗಿಡದ, ನಿಂಗಪ್ಪ ಗೊದಾಯಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net