

ಅರಕೇರಾ : ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಸೊಗಡು ಮರೆಯಾಗುತ್ತಿವೆ. ಪಾರಂಪರಿಕ ಆಚರಣೆ, ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಎತ್ತುಗಳು ಭಾರ ಕಲ್ಲು ಎಳೆಯುವ ಸ್ಪರ್ಧೆ ಅಮೋಘವಾಗಿದೆ ಎಂದು ಕಲ್ಪವೃಕ್ಷ ಪತ್ತಿನ ಸೌಹಾರ್ಧ ಸಹಕಾರಿ ಅಧ್ಯಕ್ಷ ಬಸವರಾಜ ಪೂಜಾರಿ ಹೇಳಿದರು.
ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ದ್ಯಾವಮ್ಮ ದೇವಿಯ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಎತ್ತುಗಳಿಂದ ಭಾರ ಕಲ್ಲು ಎಳೆಯುವ ಸ್ಪರ್ಧೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಮಾತ್ರ ಗ್ರಾಮೀಣ ಸೊಗಡಿನ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇದೊಂದು ರೈತರ ಹಬ್ಬವಾಗಿದೆ. ಗ್ರಾಮದಲ್ಲಿ ಎರಡನೇ ವರ್ಷ ಕಾರ್ಯಕ್ರವನ್ನು ಆಯೋಜಿಸಿದ್ದು ಸಂತಸದ ತಂದಿದೆ. ಯುವ ಪೀಳಿಗೆ ಇದನ್ನು ಮುಂದುವರಿಸಬೇಕು ಎಂದರು.
ಮೊದಲನೆ ಬಹುಮಾನದ ಪ್ರಾಯೋಜಕ ಬಸವರಾಜ ಪೂಜಾರಿ 21 ಸಾವಿರ ರೂ., ಎರಡನೇ ಬಹುಮಾನ ಪ್ರಾಯೋಜಕ ತಿಮ್ಮನಗೌಡ ಮಾಲೀಪಾಟೀಲ್ 15 ಸಾವಿರ ರೂ., ಮೂರನೇ ಬಹುಮಾನದ ಪ್ರಾಯೋಜಕ ವೆಂಕೋಬ ನಾಯಕ ದೊರೆ 10 ಸಾವಿರ ರೂ., ನಾಲ್ಕನೇ ಬಹುಮಾನದ ಪ್ರಾಯೋಜಕ ರಾಚಯ್ಯಸ್ವಾಮಿ 5 ಸಾವಿರ ರೂ. ನೀಡಿದರು.
ಪ್ರಮುಖರಾದ ಆಂಜನೆಯ ಸರಗಿನ್, ನರಸಪ್ಪ, ರಂಗಪ್ಪ, ಲಚಮಯ್ಯ, ಆಂಜನೇಯ, ಜಗನ್ನಾಥ ಆರ್.ನಾಯಕ, ಬಸವರಾಜ, ಯಲ್ಲಪ್ಪ ನಾಯಕ, ತಾಯಪ್ಪ, ಶಿವಪ್ಪ, ಹನುಮಣ್ಣ ಖಾನಾಪುರ ಇತರರು ಭಾಗವಹಿಸಿದ್ದರು.