

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ ಮತ್ತು ಅರ್ಥಶಾಸ ಅಧ್ಯಾಪಕರ ನಡುವೆ ಮಾರ್ಕೆಟ್ ಬಿಹೇವಿಯರ್ ಆ್ಯಂಡ್ ಬಿಜನೆಸ್ ಡಿಸಿಷನ್ ವಿಷಯದ ಉತ್ತರಪತ್ರಿಕೆಗಳ ವೌಲ್ಯಮಾಪನ ಕುರಿತು ಉಂಟಾದ ವಿವಾದವೂ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ವೌಲ್ಯಮಾಪನ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ವಿವಾದದಿಂದಾಗಿ ಪ್ರಥಮ ಸೆಮಿಸ್ಟರ್ ಬಿಕಾಂನ ಎಲ್ಲ ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ವೌಲ್ಯಮಾಪನ ಕಾರ್ಯವು ಸ್ಥಗಿತಗೊಂಡಿದೆ.
ವಿವಾದದ ಹಿನ್ನೆಲೆ: ಮಾಡರ್ನ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಮತ್ತು ಮಾರ್ಕೆಟ್ ಬಿಹೇವಿಯರ್ ಆ್ಯಂಡ್ ಬಿಜನೆಸ್ ಡಿಸಿಷನ್ ವಿಷಯವನ್ನು ವಾಣಿಜ್ಯಶಾಸದ ಅಧ್ಯಾಪಕರು ಬೋಧನೆ ಮಾಡಬೇಕು. ಅದರಂತೆ ಅರ್ಧ ವಿಷಯವನ್ನು ವಾಣಿಜ್ಯ ಶಾಸ್ತ್ರ ಅಧ್ಯಾಪಕರು ಬೋಧನೆ ಕೂಡ ಮಾಡಿದ್ದರು. ಈ ವೇಳೆ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಮಧ್ಯಂತರ ಅಸೂಚನೆ ಹೊರಡಿಸಿದ ವಿಶ್ವವಿದ್ಯಾಲಯವು, ಈ ವಿಷಯವನ್ನು ಅರ್ಥಶಾಸದ ಉಪನ್ಯಾಸಕರು ಬೋಸಬೇಕು ಎಂದು ತಿಳಿಸಿತ್ತು. ಅದೇ ರೀತಿ ಉಳಿದ ವಿಷಯವನ್ನು ಅರ್ಥಶಾಸ್ತ್ರ ಅಧ್ಯಾಪಕರು ಬೋಧನೆ ಮಾಡಿದ್ದರು. ಡಿಸೆಂಬರ್ 31ರಿಂದ ಪರೀಕ್ಷೆಗಳು ಆರಂಭವಾಗಿ ಜನವರಿ ತಿಂಗಳ ಅಂತ್ಯದವರೆಗೆ ಪದವಿ ಎಲ್ಲ ಪರೀಕ್ಷೆ ಮುಗಿದವು. ಸದ್ಯ ಮಾಡರ್ನ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಮತ್ತು ಮಾರ್ಕೆಟ್ ಬಿಹೇವಿಯರ್ ಆ್ಯಂಡ್ ಬಿಜನೆಸ್ ಡಿಸಿಷನ್ ವಿಷಯದ ವೌಲ್ಯಮಾಪನವನ್ನು ಅರ್ಥಶಾಸ್ತ್ರ ಅಧ್ಯಾಪಕರು ಮಾಡಬೇಕು ಎಂದು ತಿಳಿಸಲಾಗಿದೆ. ಇದಕ್ಕೆ ವಾಣಿಜ್ಯಶಾಸ್ತ್ರ ಅಧ್ಯಾಪಕರು ತಕರಾರು ತೆಗೆದಿದ್ದು, ಈ ವಿಷಯ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಪಟ್ಟಿದೆ. ಈ ವಿಷಯವನ್ನು ನಾವೇ ಬೋಧನೆ ಮಾಡಿ, ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದೇವೆ. ಹೀಗಾಗಿ ನಮಗೆ ವೌಲ್ಯಮಾಪನ ಮಾಡಲು ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವಿಷಯ ಇದೀಗ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿ ವೌಲ್ಯಮಾಪನ ಸ್ಥಗಿತಕ್ಕೂ ಕಾರಣವಾಗಿದೆ. ಈ ಬಗ್ಗೆ ನ್ಯಾಯ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ವಾಣಿಜ್ಯಶಾಸದ ಅಧ್ಯಾಪಕರ ಸಂಘ ಮನವಿ ಮಾಡಿದೆ.
‘ಮಾರ್ಕೆಟ್ ಬಿಹೇವಿಯರ್ ಆ್ಯಂಡ್ ಬಿಜನೆಸ್ ಡಿಸಿಷನ್’ ವಿಷಯವನ್ನು ಅರ್ಥಶಾಸ ಅಧ್ಯಾಪಕರು ಪಾಠ ಮಾಡಬೇಕು ಎಂದು ರಾಣಿ ಚನ್ನಮ್ಮ ವಿವಿ ಅಕಾಡೆಮಿಕ್ ಸೆಕ್ಷನ್‌ನಿಂದ ಅಸೂಚನೆ ಬಂದಿದ್ದು, ಆ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಆದರೆ, ವಾಣಿಜ್ಯಶಾಸ ಅಧ್ಯಾಪಕರು ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ವೌಲ್ಯಮಾಪನ ಬಹಿಷ್ಕಾರ ಮಾಡುತ್ತೇವೆ ಎನ್ನುವುದು ವಿಶ್ವವಿದ್ಯಾಲಯಗಳ ನಿಯಮಗಳ ವಿರುದ್ಧವಾಗಿವೆ. | ಪ್ರೊ. ರವೀಂದ್ರನಾಥ ಕದಂ ವೌಲ್ಯಮಾಪನ ಕುಲಸಚಿವ ಆರ್‌ಸಿಯು ವಿಶ್ವವಿದ್ಯಾಲಯದ ವಾಣಿಜ್ಯ ಪದವಿ ಉತ್ತರ ಪತ್ರಿಕೆ ವೌಲ್ಯಮಾಪನ ಕಾರ್ಯವು ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳ ಭವಿಷ್ಯವು ಅನಿಶ್ಚಿತತೆಯಲ್ಲಿ ಸಿಲುಕಿದೆ. ವಿಶ್ವವಿದ್ಯಾಲಯದ ಆಡಳಿತವು ಈ ವಿವಾದವನ್ನು ತ್ವರಿತವಾಗಿ ಬಗೆಹರಿಸಬೇಕು. | ಹೆಸರು ಹೇಳಲಿಚ್ಚಿಸದ ಅಧ್ಯಾಪಕ ಬೆಳಗಾವಿ