ಹೊತ್ತಿ ಉರಿಯಿತು ಹೈ‌ಟೆಂನ್ಷನ್ ವಿದ್ಯುತ್ ಲೈನ್ ಕೆಳಗೆ ಇದ್ದ ಕಾರ್ಖಾನೆ…

3
Published on

ನೆಲಮಂಗಲ: ನಗರ ಸಮೀಪದ ಜಕ್ಕಸಂದ್ರದಲ್ಲಿ ಶಾರ್ಟ್​ ಸರ್ಕಿಟ್​ನಿಂದಾಗಿ ಪ್ಲೈವುಡ್ ಫ್ಯಾಕ್ಟರಿ ಒಂದು ಹೊತ್ತಿ ಉರಿದಿದೆ.

ನೆಲಮಂಗಲದ ನಿವಾಸಿ ಪೃಥ್ವಿರಾಜ್ ಎಂಬುವರಿಗೆ ಸೇರಿದ ಮಾರುತಿ ಪ್ಲೈವುಡ್​ ಫ್ಯಾಕ್ಟರಿ ಹೊತ್ತಿ ಉರಿದಿದ್ದು, ಮರ ಹಾಗೂ ಮಿಷಿನರಿ ವಸ್ತುಗಳು ಬೆಂಕಿಗಾಹುತಿ ಆಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದ್ದು 4 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.

ಹೈ‌ಟೆಂಷನ್ ವಿದ್ಯುತ್ ಲೈನ್ ಕೆಳಗೆ ಕಾರ್ಖಾನೆ ನಿರ್ಮಾಣ ಆಗಿದ್ದು ಕಂಬದ ಅಡಿಯಲ್ಲಿ ಮರದ ದಿಮ್ಮಿಗಳನ್ನ ಜೋಡಿಸಲಾಗಿತ್ತು. ಶಾರ್ಟ್​ ಸರ್ಕಿಟ್​ನಿಂದಾಗಿ ಕಂಬ ಕೆಳಗಿದ್ದ ದಿಮ್ಮಿಗಳು ಬೆಂಕಿ ಹಿಡಿದಿವೆ. ಬೆಂಕಿ ಇಡೀ ಕಾರ್ಖಾನೆಗೂ ವ್ಯಾಪಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ. ಬೆಂಕಿಯ ಪ್ರಮಾಣ ಹೆಚ್ಚಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಕಿಯಿಂದಾಗಿ ವಿದ್ಯುತ್ ಕಂಬಕ್ಕೆ ಹಾನಿಯಾಗುವ ಶಂಕೆ ಎದುರಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಸದ್ಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net