ಕಾರ್ಖಾನೆ ಲಾಭದತ್ತ ಕೊಂಡೊಯ್ಯಲು ಪ್ರಯತ್ನ

11Athni1
Published on

ಅಥಣಿ: ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ರೈತರ ಸ್ವಾಭಿಮಾನಿ ಸಹಕಾರ ಪೆನಲ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ರಾಯಲ್ ಹಾಲ್‌ನಲ್ಲಿ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಷೇರುದಾರರು, ಮತದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ 15 ಜನರ ಸಲಹಾ ಸಮಿತಿ ರಚಿಸಿ ಇದರ ಮೂಲಕ ಕೃಷ್ಣಾ ಸಕ್ಕರೆ ಕಾರ್ಖಾನೆ ಮುನ್ನಡೆಸುವುದಿದ್ದರೆ ಮಾತ್ರ ಆಡಳಿತ ಮಂಡಳಿ ನೇತೃತ್ವ ವಹಿಸಿಕೊಳ್ಳುತ್ತೇನೆ. ಸಲಹಾ ಸಮಿತಿ ನೀಡುವ ಸಲಹೆಗಳನ್ನು ಆಡಳಿತ ಮಂಡಳಿ ಒಪ್ಪಬೇಕು. ಹಾಲಿ ಆಡಳಿತ ಮಂಡಳಿಯಿಂದ ನನಗೆ ರಾಜಕೀಯವಾಗಿ ಹಾನಿಯಾಗಿದೆ.

ಸಲಹಾ ಸಮಿತಿ ಸಲಹೆಗಳನ್ನು ಮುಂಬರುವ ಆಡಳಿತ ಮಂಡಳಿ ಚಾಚೂ ತಪ್ಪದೇ ಪಾಲಿಸುವುದಾದರೆ ಮಾತ್ರ ಚುನಾವಣೆ ಜವಾಬ್ದಾರಿ ಹೊತ್ತುಕೊಳ್ಳುವೆ. ಕಾರ್ಖಾನೆ ಲಾಭದತ್ತ ಕೊಂಡ್ಯಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಬ್ಬಿನ ತೂಕದಲ್ಲಿ ಮೋಸ ಮಾಡುವವರಿಗೆ ನನ್ನ ಕೈಚಳಕ ತೋರಿಸುವೆ. ಕೃಷ್ಣಾ ಕಾರ್ಖಾನೆಯಿಂದ ಇಲ್ಲಿಯವರೆಗೂ 10 ಪೈಸೆ ಲಂಚ ತಿಂದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಪ್ರಮಾಣ ಮಾಡಿದರು.

ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, 2007ರಿಂದ ಕಾರ್ಖಾನೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಇಲ್ಲಿಯವರೆಗೂ ರೈತರಿಗೆ ಉತ್ತಮ ಬೆಲೆ ನೀಡಿದ್ದೇವೆ. ರಾಜ್ಯದಲ್ಲಿ ಅತಿಹೆಚ್ಚು ದರ ನೀಡಿದ ಕಾರ್ಖಾನೆ ಹಾನಿಯಲ್ಲಿವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ರಿಕವರಿ ಕಬ್ಬು ಕಳಿಸಿದರೆ ಲಾಭದತ್ತ ಮುನ್ನಡೆಸುತ್ತೇವೆ ಎಂದರು. ಶಾಸಕ ರಾಜು ಕಾಗೆ ಮಾತನಾಡಿದರು.

ಸಹಕಾರ ಧುರೀಣರಾದ ಅಮೋಘ ಖೊಬ್ರಿ, ಅಣ್ಣಾಸಾಹೇಬ ಪಾಟೀಲ, ಅನಂತ ಬಸರಿಖೋಡಿ, ಶ್ಯಾಮ ಪೂಜಾರಿ, ಶೀತಲ ಪಾಟೀಲ, ಶೇಖರ ನೇಮಗೌಡ, ಸುರೇಶ ಮಾಯನ್ನವರ, ಎ.ಸಿ.ಪಾಟೀಲ, ರಾಜು ನಾಡಗೌಡ, ಸುಶೀಲ ಪತ್ತಾರ ಸೇರಿ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net