ಕಾರ್ಖಾನೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

2KOKATANUR11-Web
ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದ ಪಿಕಪಿಎಸ್‌ನಿಂದ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರನ್ನು ಸನ್ಮಾನಿಸಲಾಯಿತು. ಹನುಮಂತ ಹುದ್ದಾರ, ರಾವಸಾಬ ಐಗಳಿ, ಗಂಗಪ್ಪ ಬಿಳ್ಳೂರ, ಬಸಪ್ಪ ತೇಲಿ, ಶ್ರೀಶೈಲ ಕಾಂಬಳೆ ಇದ್ದರು.
Published on

ಕೊಕಟನೂರ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷ ಪರಪ್ಪ ಸವದಿ ಅವರು ಅಥಣಿ ತಾಲೂಕಿನ ನಾಗನೂರ ಪಿ.ಕೆ.ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬುಧವಾರ ಭೇಟಿ ನೀಡಿದರು. ನಂತರ ಸಂಘದ ಪದಾಧಿಕಾರಿಗಳು ಸವದಿ ಅವರನ್ನು ಸನ್ಮಾನಿಸಿದರು.

ಪರಪ್ಪ ಸವದಿ ಮಾತನಾಡಿ, ನಾನು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷನಾಗಲು ಹಾಗೂ ನಮ್ಮ ಪೆನಲ್‌ನ ಎಲ್ಲ ಸದಸ್ಯರು ಆಯ್ಕೆಯಾಗಲು ಕಾರ್ಖಾನೆಯ ರೈತ ಸದಸ್ಯರು, ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಠಳ್ಳಿ, ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾರಣ. ಅವರು ನನ್ನ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಒಳ್ಳೆಯ ಆಡಳಿತ ನೀಡಲಾಗುವುದು. ರೈತರು ಹಾಗೂ ಕಾರ್ಖಾನೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು. ಸಂಘದ ಉಪಾಧ್ಯಕ್ಷ ಹನುಮಂತ ಹುದ್ದಾರ, ರಾವಸಾಬ ಐಗಳಿ, ಗಂಗಪ್ಪ ಬಿಳ್ಳೂರ, ಬಸಪ್ಪ ತೇಲಿ, ಮಲ್ಲಪ್ಪ ಚೌಗಲಾ, ರಾಮಪ್ಪ ಗುಡೆಣ್ಣವರ, ಶಾಂತವ್ವ ಕರಾಳೆ, ಮಲ್ಲಮ್ಮ ಪಾಟೀಲ, ಶ್ರೀಶೈಲ ಕಾಂಬಳೆ, ಮುಖ್ಯ ಕಾರ್ಯನಿರ್ವಾಹಕ ಅಪ್ಪಾಸಾಹೇಬ ಸಾವಡಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net