ಕಾರ್ಖಾನೆಗಳಿಂದ ದವಸ, ಧಾನ್ಯ ಬೆಳೆಯಲಾಗದು

Untitled-3
ಸರ್ಜಾಪುರ ಸಮೀಪದ ಮುತ್ತನಲ್ಲೂರಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಜಯ ಕರ್ನಾಟಕ ಸಂಟನೆ ಬೆಂಬಲ ನೀಡಲಾಯಿತು. ಕರ್ನಾಟಕ ಜೈ ಭೀಮ್​ ಜನಜಾಗೃತಿ ಸಂಟನೆ ಅಧ್ಯಕ್ಷ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಉಪಾಧ್ಯ ನಾಗನಾಯಕನಹಳ್ಳಿ ಅಂಬರೀಶ್​ ಇತರರು ಇದ್ದರು.
Published on

ಸರ್ಜಾಪುರ: ಆನೇಕಲ್​ ತಾಲೂಕು ಸರ್ಜಾಪುರ ಸಮೀಪದ ಮುತ್ತನಲ್ಲೂರಲ್ಲಿ ತಾಲೂಕು ಭೂಸ್ವಾಧಿನ ವಿರೋಧ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಜಯ ಕರ್ನಾಟಕ ಸಂಟನೆ ಬೆಂಬಲ ನೀಡಿತು. ರಾಜ್ಯ ಸರ್ಕಾರವು ಸ್ವ್ಟ್​ಿ ಸಿಟಿ ಹೆಸರಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ಭೂಮಿಗಳಲ್ಲಿ ಕಾರ್ಖಾನೆಗಳು ಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಜಯ ಕರ್ನಾಟಕ ಸಂಟನೆಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಿರಣ್​ ಪ್ರಭಾಕರ್​ ರೆಡ್ಡಿ ಹೇಳಿದರು. ರಾಜ್ಯ ಸರ್ಕಾರವು ಭೂಸ್ವಾಧಿನಪಡಿಸಿಕೊಳ್ಳಲು ಗುರುತಿಸಿರುವ ಭೂಮಿಯು ಫಲವತ್ತಾಗಿದೆ.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್​ ಕರ್ನಾಟಕ ಭಾಗಗಳಲ್ಲಿ ಸಾಕಷ್ಟು ಬಂಜರು ಭೂಮಿಗಳಿದ್ದರೂ ಅಲ್ಲಿಗೆ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಲು ರಾಜ್ಯಸರ್ಕಾರ ಏಕೆ ಚಿಂತಿಸುತ್ತಿಲ್ಲ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಮತ್ತು ಕೆ.ಎಚ್​.ಬಿ.ಗಳಿಗೆ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿವೆ. ಹೀಗಿರುವಾಗ ಸರ್ಜಾಪುರ ಹೋಬಳಿಯಲ್ಲಿ ಸ್ವ್ಟ್​ಿ ಸಿಟಿ ಮಾಡಿ ಏನು ಅಭಿವೃದ್ಧಿ ಮಾಡಲಿದೆ ಎಂದರು. ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯರಾದ ವಿಶ್ವನಾಥರೆಡ್ಡಿ, ಆರ್​.ಕೃಷ್ಣಾರೆಡ್ಡಿ, ರೈತ ಮುಖಂಡರಾದ ಆರ್​.ಕೇಶವ್​, ರಾಧಾನಾಗರಾಜ್​ ರೆಡ್ಡಿ, ಗೋಪಾಲ್​ ರೆಡ್ಡಿ, ಬಾಬು ಪ್ರಸಾದ್​, ಗುರುಮೂರ್ತಿ ರೆಡ್ಡಿ, ಪ್ರತಾಪ್​, ನಾಗೇಶ್​, ಮಧುಸೂಧನ್​ ರೆಡ್ಡಿ, ಕೆ.ಲೋಕೇಶ್​, ಹರೀಶ್​, ಪ್ರಸನ್ನ, ಎಸ್​.ಸತೀಶ್​ ಬಾಬು, ಜಯಕರ್ನಾಟಕ ಸಂಟನೆಯ ಪದಾದಿಕಾರಿಗಳಾದ ಕಿಶೋರ್​, ರವಿಕುಮಾರ್​, ಯಾಸ್ಮೀನ್​ ತಾಜ್​, ವಿನೋದ್​, ನಂದೀಶ್​, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net