ಬಿಜೆಪಿಯಲ್ಲಿ ಮುಂದುವರಿದ ಬಣ ರಾಜಕೀಯ

BJP Poster in social Media
Published on

ಭಟ್ಕಳ: ವಿಧಾನಸಭಾ ಚುನಾವಣೆ ಮುಗಿದು ಸೋಲಿನ ಪರಾಮರ್ಶೆ ಮಾಡಿಕೊಳ್ಳುವ ಬದಲು ಬಿಜೆಪಿ ಮತ್ತೆ ತನ್ನ ಬಣ ರಾಜಕೀಯ ಮುಂದುವರಿಸಿದೆ.

ಸ್ಥಳೀಯ ಚುನಾವಣೆಗಳಲ್ಲೂ ಸ್ವಪಕ್ಷೀಯರೇ ಪಂಗಡ ಕಟ್ಟಿಕೊಂಡು ಮತ್ತೆ ಮುಖಾಮುಖಿಗೆ ಸಿದ್ಧರಾಗಿದ್ದಾರೆ.

ತಾಲೂಕಿನಾದ್ಯಂತ ಈಗ ಬರೀ ಸ್ಥಳೀಯ ಚುನಾವಣೆಗಳದ್ದೆ ಸದ್ದು. ವ್ಯವಸಾಯ ಸೇವಾ ಸಹಕಾರಿ ಸಂಘ, ಕೋ-ಆಫ್ ಸೊಸೈಟಿ, ಪಿಎಲ್‌ಡಿ ಬ್ಯಾಂಕ್‌ಗಳ ಚುನಾವಣೆ ಸಾಲುಸಾಲಾಗಿ ಬರಲಿದೆ.

ಸದ್ಯ ಶನಿವಾರ ಭಟ್ಕಳ ತಾಲೂಕಿನ ಜಾಲಿ ವ್ಯವಸಾಯ ಸಹಕಾರಿ ಸಂಘದ ಚುನಾವಣೆ ನಡೆಯಲಿದೆ. ಅದರಲ್ಲಿ ಬಿಜೆಪಿ ಪಕ್ಷದ ಒಂದಿಷ್ಟು ಜನ ಪಂಗಡ ಕಟ್ಟಿಕೊಂಡು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ಅದಕ್ಕೆ ಟೀಮ್ ಬಿಜೆಪಿ ಎಂದು ಹೆಸರಿಸಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಸಂಘದ ಚುನಾವಣೆಗೆ ಬಿಜೆಪಿ ಪಕ್ಷದ ಅಧ್ಯಕ್ಷ, ಪಕ್ಷದ ಕಾರ್ಯಕರ್ತರಿದ್ದು, ಅವರನ್ನು ಬಿಜೆಪಿ ಪಕ್ಷದ ಬ್ಯಾನರ್‌ನಡಿ ಸೇರಿಸಿಕೊಳ್ಳದಿರುವುದು ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಯನ್ನೇ ಬಿಜೆಪಿ ಪಂಗಡದಿಂದ ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net