ಆದ್ಯತೆ ಮೇರೆಗೆ ಗ್ರಾಮಗಳಿಗೆ ಸೌಲಭ್ಯ

LDH mla
ಮಂಚೆತವರು ಗ್ರಾಮದ ಶ್ರೀ ಕೋಟೆ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ಬಳಿ ಶಾಸಕ ಜಿ.ಎಚ್.ಶ್ರೀನಿವಾಸ್ ಸಸಿ ನೆಟ್ಟರು. ಶ್ರೀದೇವಿ, ಸತೀಶ್, ತಂಗಪ್ಪ, ಚಂದ್ರನ್ ಇತರರಿದ್ದರು.
Published on

ಲಿಂಗದಹಳ್ಳಿ: ರೋಪ್ ಲೈನ್, ಮಂಚೆತವರು ಮುಂತಾದ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಮಂಚೆತವರು ಗ್ರಾಮದ ಶ್ರೀ ಕೋಟೆ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದರು.
ಲಿಂಗದಹಳ್ಳಿ ಹೋಬಳಿ ಹಿಂದೆ ಬೀರೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಕಾರಣ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನಾನು ಮೊದಲ ಬಾರಿ ಶಾಸಕನಾದ ಸಂದರ್ಭದಲ್ಲಿ ರೋಪ್ ಲೈನ್ ಗ್ರಾಮದಿಂದ ದೂಪದ ಖಾನ್‌ವರೆಗಿನ ರಸ್ತೆ, ಮಸ್ಕಲ್ ಮರಡಿಯಿಂದ ಲಾಲ್‌ಬಾಗ್‌ವರೆಗಿನ ರಸ್ತೆ, ಗಂಗೂರು ರಸ್ತೆ ಸೇರಿದಂತೆ ಅನೇಕ ರಸ್ತೆಗಳ ಅಭಿವೃದ್ಧಿ ಮಾಡಿದ್ದೆ. ಇತ್ತೀಚೆಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಜಯಪುರ ಗ್ರಾಮದ ಕಾಂಕ್ರೀಟ್ ರಸ್ತೆ, ಲಿಂಗದಹಳ್ಳಿ ಕಾಂಕ್ರೀಟ್ ರಸ್ತೆ, ದೂಪದ ಖಾನ್ ಗ್ರಾಮದ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ಮಾಜಿ ಅಧ್ಯಕ್ಷ ಬ್ರುನೋ ಡಿಕೋಸ್ಟಾ, ಪಿ.ಎ.ಮನೋಜ್‌ಕುಮಾರ್, ಗ್ರಾಮಸ್ಥರಾದ ರಾಧಾಕೃಷ್ಣ, ಮಂಜುನಾಥ್, ಎನ್.ಎಸ್.ಹನುಮಂತಪ್ಪ, ಸತೀಶ್, ತಂಗಪ್ಪ, ಶಕ್ತಿ ಪ್ರಸಾದ್, ಚಂದ್ರನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net