

ಎನ್.ಆರ್.ಪುರ: ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು, ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶಾಸಕರ ಕಚೇರಿಯಲ್ಲಿ ಮೀನುಗಾರಿಕೆ, ಕಾರ್ಮಿಕ ಹಾಗೂ ಕೈಗಾರಿಕೆ ಇಲಾಖೆಗಳ ಲಾನುಭವಿಗಳಿಗೆ ಕುಲಕಸುಬುಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಕಾರ್ಮಿಕರು ಹುಟ್ಟುವಾಗಲೇ ವಾಸ್ತು ಶಿಲ್ಪಿಗಳಾಗಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಊರೂರು ಅಲೆದಾಡುತ್ತಾರೆ. ಅತ್ಯಂತ ಅಪಾಯಕಾರಿ ಕೆಲಸಗಳನ್ನೂ ನಿರ್ವಹಿಸುತ್ತಾರೆ. ಈ ವೇಳೆ ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ ಎಂದರು.
2007ರಲ್ಲಿ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಆಸ್ಕರ್ ರ್ನಾಂಡೀಸ್ ಅವರು ಕೂಲಿ ಕಾರ್ಮಿಕರಿಗೆ ಶಾಶ್ವತ ಶಕ್ತಿ ತುಂಬಲು ಅನೇಕ ರೂಪುರೇಷೆಗಳನ್ನು ಸಿದ್ಧ ಪಡಿಸಿದ್ದರು. ನಂತರ ಕಾರ್ಮಿಕ ಇಲಾಖೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅದನ್ನು ಜಾರಿಗೆ ತಂದು ಯಾವುದೇ ಸರ್ಕಾರಿ ಕಾಮಕಾರಿಗಳ ನಿರ್ವಹಣೆ ಮೊತ್ತದಲ್ಲಿ ಶೇ.1ರಷ್ಟನ್ನು ಕಾರ್ಮಿಕರ ಕಲ್ಯಾಣ ನಿಧಿಗೆ ಪಾವತಿಸುವ ವ್ಯವಸ್ಥೆ ಮಾಡಿದರು. 10 ಲಕ್ಷ ಮೇಲ್ಪಟ್ಟ ಕಾಮಗಾರಿಗಳಿಗೆ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೂ ಕಾರ್ಮಿಕರ ಕಲ್ಯಾಣ ನಿಧಿಗೆ ಕರ ಪಾವತಿಸುವ ಕಾನೂನು ಮಾಡಿ, ಕಾರ್ಮಿಕರ ವರ್ಗಕ್ಕೆ ಬಲ ತುಂಬುವಂತೆ ಮಾಡಿದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ಕರುಗುಂದ ನಂದೀಶ್, ಈ.ಸಿ.ಜೋಯಿ, ಮಾಳೂರುದಿಣ್ಣೆ ರಮೇಶ್, ರಾಜೇಶ್, ಮಂಜು , ಕಾರ್ಮಿಕ ಇಲಾಖೆ ಹಿರಿಯ ನಿರ್ದೇಶಕ ಜೀವನ್ ಕುಮಾರ್, ಕೈಗಾರಿಕೆ ಇಲಾಖೆಯ ಧರ್ಮರಾಜ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನ ಮತ್ತಿತರರು ಇದ್ದರು.