

ಮಮದಾಪುರ: ಗ್ರಾಮದ ಮಹಿಳೆಯರು ಸ್ವಸಹಾಯ ಸಂದ ಸದಸ್ಯತ್ವ ಪಡೆದು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಶುರಾಮ ಸ್ತೆ ಹೇಳಿದರು. ಸಮೀಪದ ಕೊಳವಿ ಗ್ರಾಮದ ಶ್ರೀಗುಂಡ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮೀಣ ಅಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ತಾಪಂ, ಗ್ರಾಪಂ ಇಲಾಖೆ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಕತ ಬ್ಯಾಂಕಿನ ಸಾಲದ ಸಹಾಯದಿಂದ ಗೃಹೋಪಯೋಗಿ ವಸ್ತು ಉತ್ಪಾದಿಸುವ ಮೂಲಕ ಆರ್ಥಿಕ ಅಭಿವದ್ಧಿ ಹೊಂದಬೇಕು ಎಂದರು. ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಿತು. ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ಪಿಡಿಒ ಸಂಜುಕುಮಾರ ಜೋತಾವರ, ಗ್ರಂಥಪಾಲಕಿ ಮಲ್ಲವ್ವ ಪಾಟೀಲ, ಗ್ರಾಪಂ ಸದಸ್ಯರು, ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣೆ ಟಕದ ಸಿಬ್ಬಂದಿ ಇತರರಿದ್ದರು.