ಸೌಲಭ್ಯಗಳ ಬಗ್ಗೆ ತಿಳಿಸಲು ಜಾಲತಾಣಗಳ ಬಳಕೆ

kampli sociel media
ಕಂಪ್ಲಿಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಗ್ರಾಸ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ, ಎನ್.ಹಬೀಬ್ ರೆಹಮಾನ್ ಮತ್ತು ಕೆಪಿಸಿಸಿ ಎಸ್ಸಿ ವಿಭಾಗದ ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ವೀರಾಂಜನೇಯಲು ವರಿಗೆ ಶಾಸಕ ಜೆ.ಎನ್.ಗಣೇಶ್ ಆದೇಶಪತ್ರ ವಿತರಿಸಿದರು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಚನ್ನಬಸವನಗೌಡ, ಕೆ.ಮಸ್ತಾನ್‌ಸಾಬ್, ಕೆ.ಷಣ್ಮುಖಪ್ಪ ಇತರರಿದ್ದರು.
Published on

ಕಂಪ್ಲಿ: ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಗ್ರಾಮಾಂತರ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಎನ್.ಹಬೀಬ್‌ರೆಹಮಾನ್ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಭಾನುವಾರ ಮಾತನಾಡಿದರು.

ಮತಗಳನ್ನು ಸೆಳೆಯಲು ವಿಶೇಷ ಕಾರ್ಯಕ್ರಮ

ಸಾಮಾಜಿಕ ಜಾಲತಾಣಗಳ ಮೂಲಕ ಕಂಪ್ಲಿ, ಸಿರುಗುಪ್ಪ, ಸಂಡೂರು ತಾಲೂಕಿನ ಗ್ರಾಮೀಣ ವಿಭಾಗಗಳಲ್ಲಿನ ಮತದಾರರ ಸಂಪರ್ಕ, ಸಂವಹನಕ್ಕೆ ಹಾಗೂ ಸರ್ಕಾರ ಸೌಲಭ್ಯ, ಯೋಜನೆಗಳ ಮಾಹಿತಿ ನೀಡಲಾಗುವುದು ಎಂದರು.

ಕೆಪಿಸಿಸಿ ಎಸ್ಸಿ ವಿಭಾಗದ ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷ ವೀರಾಂಜನೇಯಲು ಮಾತನಾಡಿ, ಚುನಾವಣೆಯಲ್ಲಿ ಪರಿಶಿಷ್ಟರ ಮತಗಳನ್ನು ಸೆಳೆಯಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಕಾರ್ಯಕರ್ತರ ಬೆಂಬಲದಿಂದ ಪಕ್ಷವನ್ನು ಬಲವರ್ಧಿಸಲು ಯೋಜನೆ ರೂಪಿಸಲಾಗುವುದು ಎಂದರು.

ಶಾಸಕ ಜೆ.ಎನ್.ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಚನ್ನಬಸವರಾಜ, ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಅಧ್ಯಕ್ಷ ಕೆ.ಮಸ್ತಾನ್‌ಸಾಬ್, ಪುರಸಭೆ ಸದಸ್ಯರಾದ ಎಂ.ಉಸ್ಮಾನ್, ಹೊನ್ನೂರವಲಿ, ಮುಖಂಡರಾದ ಕೆ.ಷಣ್ಮುಖಪ್ಪ, ಎಂ.ಸಿ.ಮಾಯಪ್ಪ, ಕೆ.ಮನೋಹರ, ಟಿ.ಸುರೇಶರೆಡ್ಡಿ, ಬಿ.ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net