4.65 ಕೋಟಿ ವೆಚ್ಚದಲ್ಲಿ ಸಂತೆ ಮೈದಾನಕ್ಕೆ ಸೌಕರ್ಯ

Published on

ಶಾಸಕ ಬಿ.ಎನ್​.ರವಿಕುಮಾರ್​ ಸ್ಥಳ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ

ನಗರದಲ್ಲಿರುವ ವಾರದ ಸಂತೆ ಮೈದಾನ ಅಭಿವೃದ್ಧಿಪಡಿಸಿ ಸಂತೆಗೆ ಬರುವ ರೈತರು, ವ್ಯಾಪಾರಿಗಳು, ಗ್ರಾಹಕರಿಗೆ ಸೌಕರ್ಯ ಕಲ್ಪಿಸಬೇಕಿದೆ.ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕ ಬಿ.ಎನ್​.ರವಿಕುಮಾರ್​ ತಿಳಿಸಿದರು.

ನಗರದಲ್ಲಿನ ವಾರದ ಸಂತೆ ಮೈದಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ವಾರದ ಸಂತೆಯಲ್ಲಿ ಸುತ್ತಾಡಿ ಪರಿಶೀಲಿಸಿದರು.ಸಂತೆಯಲ್ಲಿ ಬೆಳಗಿನಿಂದ ಸಂಜೆಯವರೆವಿಗೂ ವ್ಯಾಪಾರ ಮಾಡಿಕೊಂಡು ಕೂರುವ ವ್ಯಾಪಾರಿಗಳಿಗೆ ಬಿಸಿಲು ಗಾಳಿಯಿಂದ ರಸಲು ಮೇಲ್ಛಾವಣಿ ನಿರ್ಮಿಸಬೇಕಿದೆ.

ಶೌಚಗೃಹ, ಉಪಹಾರ ಊಟದ ಕ್ಯಾಂಟೀನ್​, ವಾಹನ ನಿಲ್ಲಿಸಲು ಸೂಕ್ತ ಸ್ಥಳಾವಕಾಶ ನಿರ್ಮಿಸಬೇಕಿದೆ.ಮುಖ್ಯವಾಗಿ ಸ್ವಚ್ಛತಾ ಕಾರ್ಯ ಆಗಬೇಕಿದೆ.ಮಳೆಗಾಲ ಸೇರಿ ವರ್ಷದ ಉದ್ದಕ್ಕೂ ಇಲ್ಲಿ ಮಳೆ ನೀರು, ಚರಂಡಿ ನೀರು

ನಿಲ್ಲದಂತೆ ಸೂಕ್ತ ವ್ಯವಸ್ಥೆ ಆಗಬೇಕೆಂದರು.

ಸಂತೆಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಎರಡೂ ಕಡೆ ದ್ವಾರಗಳನ್ನು ನಿರ್ಮಿಸಿ ಗೇಟ್​ ಅಳವಡಿಸಬೇಕಿದ್ದು, ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರೋತ್ಥಾನ&4ನೇ ಹಂತದಲ್ಲಿ 4.65 ಕೋಟಿ ರೂ.ವಾರದ ಸಂತೆ ಮೈದಾನ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಬೆಳಗಾವಿಯಲ್ಲಿ ನಿರ್ಮಿಸಿರುವ ಸಂತೆ ಮೈದಾನದ ಮಾದರಿಯಲ್ಲೇ ಶಿಡ್ಲಟ್ಟದ ಸಂತೆ ಮೈದಾನ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಗರಸಭೆ ಪೌರಾಯುಕ್ತೆ ಜಿ.ಅಮೃತಾ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರೆ ಮಾಧವಿ, ಎಇಇ ರುನಾಥ್​, ಸದಸ್ಯರಾದ ಎಸ್​.ರಾವೇಂದ್ರ, ಅನಿಲ್​ಕುಮಾರ್​, ಸುರೇಶ್​, ಮುಖಂಡರಾದ ತಾದೂರು ರು, ನವೀನ್​, ಬಾಲು, ಕೆ.ಬಿ.ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net