

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 67ನೇ ವಾರ್ಡ್ನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ನಂ. 3 ಮತ್ತು 5ರಲ್ಲಿ 36 ಸಿಸಿ ಕ್ಯಾಮರಾ ಹಾಗೂ 2 ಸ್ಮಾರ್ಟ್ಬೋರ್ಡ್ಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅವರ ಪ್ರಯತ್ನದಿಂದ ಪಾಲಿಕೆ ಅನುದಾನದಡಿ ಸಿಸಿ ಕ್ಯಾಮರಾ ಹಾಗೂ ಸ್ಮಾರ್ಟ್ಬೋರ್ಡ್ಗಳನ್ನು ಎರಡೂ ಶಾಲೆಗಳಲ್ಲಿ ಅಳವಡಿಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಪ್ಪಗೌಡ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅವರು ವಾರ್ಡ್ನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದರ ಫಲವಾಗಿ ನೀರಿನ ಟ್ಯಾಂಕ್ ನಿರ್ವಣಗೊಂಡು ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರಕಿದೆ. ವಿದ್ಯಾರ್ಥಿಗಳಿಗೆ ಡೆಸ್ಕ್, ಶೌಚಗೃಹ ನಿರ್ವಣ, ಶಾಲೆಯ ಆವರಣದಲ್ಲಿ ಫೆವರ್ಸ್ ಅಳವಡಿಕೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಾಲಿಕೆ ಅನುದಾನದಡಿ ಒದಗಿಸಿದ್ದಾರೆ ಎಂದರು.
ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಐ.ಎ. ನದಾಫ ಅವರನ್ನು ಸನ್ಮಾನಿಸಲಾಯಿತು. ಪಾಲಿಕೆ ಸಹಾಯಕ ಆಯುಕ್ತ ಮನೋಜ ಗಿರೀಶ, ಎಸ್ಡಿಎಂ ಅಧ್ಯಕ್ಷೆ ಕವಿತಾ ಅಪ್ಪೋಜಿ, ಮುಖ್ಯೋಪಾಧ್ಯಾಯ ಜಯಶ್ರೀ ಹೆರಕಲ, ಮಂಜುನಾಥ ಜಂಗಳಿ, ಲಕ್ಷ್ಮೀ ಚವ್ಹಾಣ, ಮಹಾಬಳೇಶ್ವರ ಯಾವಗಲ್ಲ, ಸಂಜಯ ವಿ.ಎನ್. ಹಾಗೂ ಇತರರು ಇದ್ದರು.