

ಗಂಗಾವತಿ: ಭ್ರಷ್ಟಾಚಾರದ ವಿರುದ್ಧ ಸಂಘಟನೆ ಸದಸ್ಯರು ರಚನಾತ್ಮಕ ಹೋರಾಟ ರೂಪಿಸಬೇಕೆಂದು ಭಾರತೀಯ ಪ್ರಜಾ ಸೇನೆ ರಾಜ್ಯ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ ಹೇಳಿದರು.
ನಗರದ ಸರ್ಕೀಟ್ ಹೌಸ್‌ನಲ್ಲಿ ಭಾರತೀಯ ಪ್ರಜಾ ಸೇನೆ ರಾಜ್ಯ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಸಂಘಟನೆ ನೊಂದವರ ಧ್ವನಿಯಾಗಿದ್ದು, ಹೋರಾಟದ ಮೂಲಕ ಸಮಸ್ಯೆ ಪರಿಹರಿಸಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸಮಾಡಬೇಕು ಎಂದರು.
ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಸವರಾಜ ಮ್ಯಾಗಳಮನಿ (ಜಿಲ್ಲಾಧ್ಯಕ್ಷ), ಸೋಮನಾಥ ಅಕ್ಕಿ ರೊಟ್ಟಿ(ಉಪಾಧ್ಯಕ್ಷ), ಹುಲಿಗೇಶ ಕೊಜ್ಜಿ(ಕಾರ್ಯದರ್ಶಿ), ಕೃಷ್ಣ ಮೆಟ್ರಿ ಹೊಸಳ್ಳಿ(ತಾಲೂಕಾಧ್ಯಕ್ಷ), ಪಂಪಾಪತಿ ಕುರಿ ಹೊಸಳ್ಳಿ(ಉಪಾಧ್ಯಕ್ಷ ), ಜಡಿಯಪ್ಪ ಹಂಚಿನಾಳ್(ಪ್ರಧಾನ ಕಾರ್ಯದರ್ಶಿ) ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು. ಪ್ರಮುಖರಾದ ಅಯ್ಯಪ್ಪ, ರವಿ ಇತರರಿದ್ದರು.