ರೈತರಿಗೆ ಅನುಕೂಲ ಕಲ್ಪಿಸಬೇಕು

web1
ಸವದತ್ತಿ ಎಪಿಎಂಸಿ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ವಿಶ್ವಾಸ ವೈದ್ಯ, ಅಶ್ವತ್ಥ ವೈದ್ಯ, ಚಂದ್ರಶೇಖರ ಪೂಜೇರ, ಮಾರುತಿ ಬಸಲಿಗುಂದಿ ಇತರರಿದ್ದರು.
Published on

ಸವದತ್ತಿ: ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿಸುವ ದಿಶೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿ, ರೈತ ದೇಶದ ಬೆನ್ನೆಲುಬು ಹಾಗಾಗಿ ರೈತರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಲಾನುಭವಿಗೆ ತಲುಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ರೈತರ ಪರವಾಗಿ ಕೆಲಸ ಮಾಡುವ ಮೂಲಕ ರೈತ ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.

ನೂತನ ಅಧ್ಯಕ್ಷ ಚಂದ್ರಶೇಖರ ದೇವಪ್ಪ ಪೂಜೇರ, ಉಪಾಧ್ಯಕ್ಷ ಮಾರುತಿ ಲಕ್ಷ್ಮಣ ಬಸಲಿಗುಂದಿ, ಸದಸ್ಯರಾದ ಪರಸಪ್ಪ ಕೌಜಗೇರಿ, ಮಾರುತಿ ಶಿಂಧೆ, ಗದಿಗೆಪ್ಪ ನಡುವಿನಹಳ್ಳಿ, ಮುಮತಾಜ್ ಮುಲ್ಲಾ, ಪಕೀರಪ್ಪ ಚಂದರಗಿ, ಶಂಕ್ರಪ್ಪ ಸಾವಕ್ಕನವರ, ರಾಜು ಕಲಾಲ್, ಮಲ್ಲಿಕಾರ್ಜುನಗೌಡ ಇನಾಮತಿ ಅವರನ್ನು ಸತ್ಕರಿಸಲಾಯಿತು.
ಪ್ರಭು ಪ್ರಭುನವರ, ಅಶ್ವತ್ಥ ವೈದ್ಯ, ರಾಜಶೇಖರ ಕಾರದಗಿ, ದೀಪಕ ಜಾನ್ವೆಕರ, ಮಲ್ಲಿಕಾರ್ಜುನ ಪುರದಗುಡಿ, ಡಿ.ಡಿ.ಟೋಪೋಜಿ, ಸುರೇಶ ಬಡಗಿಗೌಡ್ರ, ದಿಲಾವರ್ ಸನದಿ, ಮಹಾರಾಜಗೌಡ ಪಾಟೀಲ, ಫಕ್ರುಸಾಬ್ ದೊಡಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net