

ಶಿರಹಟ್ಟಿ: ಮಹಿಳೆಯರು ಸ್ವಾವಲಂಬಿಯಾಗಲು ಹಾಗೂ ಅವರ ಆರ್ಥಿಕ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಯೋಜನಾಧಿಕಾರಿ ಪುನೀತ್ ಓಲೇಕಾರ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಸೋಮವಾರ 60 ಸ್ವಸಹಾಯ ಸಂಘಗಳ ಒಕ್ಕೂಟ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕರಕುಶಲ ತರಬೇತಿ, ಸ್ವ ಉದ್ಯೋಗಕ್ಕೆ ಪ್ರೇರಣೆ, ಸಣ್ಣ ಉದ್ಯಮ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುತ್ತದೆ. ಮಹಿಳೆಯರು ಧರ್ಮಸ್ಥಳದ ಯೋಜನೆಯ ಲಾಭಾಂಶವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸುಸಂಸ್ಕೃತ ಸಮಾಜಕ್ಕೆ ಸ್ವಾವಲಂಬನೆ ಜೀವನ ಅಗತ್ಯ. ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಶಿಕ್ಷಣ, ಆರೋಗ್ಯ ಹಾಗೂ ವಿವಿಧ ವಿಭಾಗಗಳಲ್ಲಿ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯೇ ಸಂಸ್ಥೆಯ ಪರಮ ಗುರಿ ಎಂದರು.
ಗ್ರಾಪಂ ಸದಸ್ಯ ತಿಮ್ಮರೆಡ್ಡಿ ಮರಡ್ಡಿ, ಮೋಹನ್ ಗುತ್ತಮ್ಮನವರ, ಒಕ್ಕೂಟದ ಅಧ್ಯಕ್ಷೆ ಅಕ್ಕಮ್ಮ, ಗೀತಾ, ವಲಯ ಮೇಲ್ವಿಚಾರಕಿ ಮಹಾದೇವಿ, ಸೇವಾ ಪ್ರತಿನಿಧಿ ರೇಣುಕ ಕಮ್ಮಾರ ಇದ್ದರು.