ಇ-ಕಾಮರ್ಸ್​ನ ತ್ವರಿತ ಅಳವಡಿಕೆಗೆ ಅನುಕೂಲ

ondc
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಡಿಜಿಟಲ್ ವಾಣಿಜ್ಯಕ್ಕಾಗಿ ತೆರೆದ ಜಾಲತಾಣ (ಒಎನ್​ಡಿಸಿ-ಓಪನ್ ನೆಟವರ್ಕ್ ಫಾರ್ ಡಿಜಿಟಲ್ ಕಾಮರ್ಸ್)ವು ಒಂದು ಮುಕ್ತ ಮಾರುಕಟ್ಟೆ ಅಂತರ್ಗತ ಡಿಜಿಟಲ್ ಮಾರುಕಟ್ಟೆಯನ್ನು ರಚಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ. ಈ ಉಪಕ್ರಮವು ಇ-ಕಾಮರ್ಸ್​ನ ತ್ವರಿತ ಅಳವಡಿಕೆಗೆ ಅನುಕೂಲವಾಗಲಿದೆ ಎಂದು ಒಎನ್​ಡಿಸಿ ಅಧಿಕಾರಿ ಅರವಿಂದ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದೊಂದಿಗೆ ಡಿಜಿಟಲ್ ವಾಣಿಜ್ಯಕ್ಕಾಗಿ ತೆರೆದ ಜಾಲತಾಣ ಕುರಿತು ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇದು ಮಾರಾಟಗಾರರು ಒಂದೇ ನೋಂದಣಿಯೊಂದಿಗೆ ಅನೇಕ ಇ-ಕಾಮರ್ಸ್ ಪ್ಲಾಟ್​ಫಾಮರ್್​ಗಳಲ್ಲಿ ಖರೀದಿದಾರರನ್ನು ತಲುಪಬಹುದು. ಈ ನವೀನ ವೇದಿಕೆಯು ಖರೀದಿದಾರರಿಗೆ ಆನ್​ಲೈನ್ ಮಾರುಕಟ್ಟೆ ಸ್ಥಳಗಳಿಂದ ಖರೀದಿಸಲು ಅನುಮತಿಸುತ್ತದೆ ಎಂದರು.

ಭಾರತದಲ್ಲಿ 12 ಮಿಲಿಯನ್​ಗಿಂತಲೂ ಹೆಚ್ಚು ಮಾರಾಟಗಾರರು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡುವ ಅಥವಾ ಮರು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. ಇದರಲ್ಲಿ ಕೇವಲ 15,000 ಮಾರಾಟಗಾರರು ಇ-ಕಾಮರ್ಸ್ ಅನ್ನು ಸಕ್ರಿಯಗೊಳಿಸಿದ್ದಾರೆ. ಇ-ರಿಟೇಲ್ ವ್ಯಾಪಾರವು ಬಹುಪಾಲು ಮಾರಾಟಗಾರರಿಗೆ, ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಂದ ತಲುಪಿಲ್ಲ. ಹೆಚ್ಚಿನ ಸಂಖ್ಯೆಯ ಜನರು ಇದರಲ್ಲಿ ಭಾಗವಹಿಸುವಿಕೆಯ ಮೂಲಕ ದೇಶದಲ್ಲಿ ಇ-ಕಾಮರ್ಸ್ ಅನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳಿದರು.

ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು. ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಬಿ. ನಂದಮ ಹಾಗೂ ಕೆಡಿಇಎಂ ನ ಅಮರ ಮೋಮಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net