ಸಶಸ್ತ್ರ ಪೊಲೀಸ್ ಪೇದೆಗಳ ನೇಮಕಾತಿಗೆ ಸುಗಮ ಪರೀಕ್ಷೆ

Exam
Published on

ದಾವಣಗೆರೆ: ಕಲ್ಯಾಣ ಕರ್ನಾಟಕ ಪ್ರದೇಶದ ಸಶಸ್ತ್ರ ಪೊಲೀಸ್‌ಪೇದೆ ಹುದ್ದೆಗಳ ನೇಮಕಾತಿ ಸಂಬಂಧ ನಗರದ 12 ಕೇಂದ್ರಗಳಲ್ಲಿ ಭಾನುವಾರ ಲಿಖಿತ ಪರೀಕ್ಷೆ ಸುಗಮವಾಗಿ ನಡೆಯಿತು.

ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ಲಿಖಿತ ಪರೀಕ್ಷೆ ನಡೆಯಿತು. 4120 ಅಭ್ಯರ್ಥಿಗಳು ಹಾಜರಾದರೆ, 1593 ಮಂದಿ ಗೈರಾದರು. ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಎಸ್ಪಿ ಉಮಾ ಪ್ರಶಾಂತ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಜಿಬಿ ಪ್ರಥಮ ದರ್ಜೆ, ಎವಿಕೆ, ಅಥಣಿ ಸಂಯುಕ್ತ ಪಿಯು, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ, ಜಿ.ಎಂ. ಹಾಲಮ್ಮ, ಜಿಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಲಕರ ಸರ್ಕಾರಿ ಪಪೂ, ಕೆಎಸ್‌ಎಸ್, ಮೋತಿ ವೀರಪ್ಪ, ಸೀತಮ್ಮ, ಎಸ್‌ಟಿಜೆ ಪಿಯು ಕಾಲೇಜು, ಸೇಂಟ್‌ಜಾನ್ಸ್ ಆಂಗ್ಲ ಮಾಧ್ಯಮ ಶಾಲೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net