ಯೋಜನೆ ಸೌಲಭ್ಯ ಪಡೆಯಲು: ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ

Horticulture department 23 DEC 19
Published on

ಮಂಡ್ಯ: ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕಾಫಿ, ಟೀ, ರಬ್ಬರ್, ಅಡಿಕೆ ಬೆಳೆ ಹೊರತುಪಡಿಸಿ ಉಳಿದೆಲ್ಲ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕ ಅಳವಡಿಕೆಗೆ ಒಂದು ಕುಟುಂಬಕ್ಕೆ ಒಟ್ಟಾರೆ 5 ಹೆಕ್ಟೇರ್ ಪ್ರದೇಶಕ್ಕೆ ಮಿತಿಗೊಳಿಸಿ ಸಹಾಯಧನ ಕಲ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಮೊದಲ 2 ಹೆಕ್ಟೇರ್‌ಗೆ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ಹಾಗೂ ಉಳಿದ 3 ಹೆಕ್ಟೇರ್‌ಗೆ ಶೇ.45 ರಷ್ಟು ಸಹಾಯಧನ ಕಲ್ಪಿಸಲಾಗುವುದು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆಬೆಳೆ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳುವ ರೈತರಿಗೆ ಕೊಳವೆ ಬಾವಿ ಕೊರೆಸಲು, ಟ್ರ್ಯಾಕ್ಟರ್ ಟ್ರ್ಯಾಲಿ ಖರೀದಿಸಲು ಮತ್ತು ಡೀಸಲ್ ಪಂಪ್‌ಸೆಟ್ ಖರೀದಿಸಲು ಸಹಾಯಧನವನ್ನು ಎಲ್ಲ ವರ್ಗದ ರೈತರಿಗೆ ಕಲ್ಪಿಸಲಾಗುವುದು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಕೃಷಿ ಹೊಂಡ ನಿರ್ಮಾಣ, ಈರುಳ್ಳಿ ಶೇಖರಣಾ ಘಟಕ, ಯಾಂತ್ರೀಕರಣ, ಪ್ಯಾಕ್ ಹೌಸ್ ಇತ್ಯಾದಿ ಕಾರ್ಯಕ್ರಮಕ್ಕೆ ಸಹಾಯಧನವನ್ನು ಎಲ್ಲ ವರ್ಗದ ರೈತರಿಗೆ ನೀಡಲಾಗುವುದು. ಈ ಎಲ್ಲ ಯೋಜನೆಗಳಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು, ಅಂಗವಿಕಲ ರೈತರಿಗೆ ಅರ್ಜಿ ಸಲ್ಲಿಸಬಹುದು.

ಮಾಹಿತಿ ಮತ್ತು ಅರ್ಜಿಗಾಗಿ ಕೆ.ಆರ್.ಪೇಟೆ ತಾಲೂಕಿನವರು ದೂ.ಸಂ 08237-262540, ಮದ್ದೂರು ದೂ.ಸಂ 08232-233450, ಮಳವಳ್ಳಿ, ದೂ.ಸಂ 08230-242301, ಮಂಡ್ಯ ದೂ.ಸಂ 08232-225735, ನಾಗಮಂಗಲ ದೂ.ಸಂ 08234-286160, ಪಾಂಡವಪುರ ದೂ.ಸಂ 08236-255055, ಶ್ರೀರಂಗಪಟ್ಟಣ ತಾಲೂಕಿನವರು ದೂ.ಸಂ 08236-253205 ರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net