

ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನಗಳ ಸೇವೆ ಹೆಚ್ಚಿನ ರೀತಿಯಲ್ಲಿ ದೊರೆಯುವಂತಾದರೆ ಮೈಸೂರು ನಗರ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು.
ಮೈಸೂರು ನಗರದಲ್ಲಿ ಮೊದಲಿನಂತೆ ಹೆಚ್ಚು ವಿಮಾನಗಳು ಹಾರಾಡಬೇಕು. ಬೆಂಗಳೂರು ನಂತರ ಮೈಸೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಳಿಕ ಆ ನಗರದ ಚಹರೆಯೇ ಬದಲಾಗಿದೆ. ಹಾಗಾಗಿ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ಈ ಭಾಗದ ಚಿತ್ರಣವೂ ಬದಲಾಗಲಿದೆ ಎಂದರು.
ವಿಮಾನಗಳು ಹಾರಾಡಿದರೆ ದೊಡ್ಡ ದೊಡ್ಡ ಉದ್ಯಮ ಸ್ಥಾಪನೆ ಆಗಲಿದೆ. ಕೈಗಾರಿಕೆಗಳು ಸ್ಥಾಪನೆಯಾಗಲಿದೆ. ಸಂಸದ ಶ್ರಮಿದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ರೀತಿಯ ನೆರವು ನೀಡಬೇಕು ಎಂದು ಕೋರಿದರು.