ಸೌಲಭ್ಯ ಪಡೆಯಲು ಸಂಘಟಿತರಾಗಲಿ

3
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎಸ್.ಜಿ. ಸಿದ್ನಾಳ, ಅಂಬಿರಾವ ಪಾಟೀಲ, ಟಿ.ಆರ್. ಕಾಗಲ ಇತರರಿದ್ದರು.
Published on

ಗೋಕಾಕ: ಸರ್ಕಾರಿ ಸೌಲಭ್ಯ ಪಡೆಯುವುದು ನಮ್ಮ ಹಕ್ಕು. ಅದನ್ನು ಪಡೆಯಲು ಸಂಘಟಿತರಾಗಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಜಿ. ಸಿದ್ನಾಳ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನಿವತ್ತ ನೌಕರರ ವೇದಿಕೆ ತಾಲೂಕು ಘಟಕದ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ 80 ವಸಂತ ಪೂರೈಸಿದ ಸಂಘದ ಸದಸ್ಯರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

7ನೇ ವೇತನ ಆಯೋಗ ಜಾರಿಯಾಗಬೇಕು. ಬಸ್ ಹಾಗೂ ರೈಲುಗಳಲ್ಲಿ ವಿಶೇಷ ರಿಯಾಯಿತಿ ನೀಡಬೇಕು. ಪಿಂಚಣಿ ಸೇರಿ ಇತರ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು. ತಿಥಿಗಳಾದ ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ, ಬಿ.ಆರ್. ಮುರಗೋಡ, ಐ.ಎನ್. ಹೊಸಮನಿ, ಸಂಘದ ಎಚ್.ಡಿ. ಮುಲ್ಲಾ, ಕಲ್ಲಪ್ಪ ವಾಲಿಕಾರ, ಎಸ್.ಎಚ್. ಗಿರಡ್ಡಿ, ಡಾ.ಬಸವರಾಜ ಗೋಮಾಡಿ, ಎ.ಎನ್. ಬೆಳವಿ, ಎಸ್.ಜಿ. ರಜಪೂತ, ಪಿ.ಎಂ. ಕಂಬಳಿ, ಪಿ.ಆರ್. ಜನ್ನಾಳಿಮಠ, ಎಸ್.ಜಿ.ದೊಡ್ಡಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net