ಮೋಡೆಲಿಂಗ್ ಕ್ಷೇತ್ರ ಪ್ರವೇಶಕ್ಕೆ ಫೇಸಸ್ ಆಫ್ ಮುಳಿಯ - ರೂಪದರ್ಶಿಯಗಲು ಬಯಸುವವರಿಗೆ ಹೊಸ ಅವಕಾಶ - ಚಿನ್ನಾಭರಣ ಸಂಸ್ಥೆಯ ವಿನೂತನ ಕಾರ್ಯಕ್ರಮ

PTR_3 SEP_4
Published on


ಪುತ್ತೂರು: ನವೀನ ವಿನ್ಯಾಸದ ಆಭರಣ ಹಾಗೂ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಮುಳಿಯ ಜ್ಯುವೆಲ್ಸ್ ರೂಪದರ್ಶಿಗಳಾಗಿ ಸಮಾಜಕ್ಕೆ ಪರಿಚಯವಾಗಬೇಕೆಂಬವರಿಗೆ ಮುಳಿಯ ಮುಖಗಳು (ಫೇಸಸ್ ಆಫ್ ಮುಳಿಯ) ಮೂಲಕ ಹೊಸ ಅವಕಾಶ ಕಲ್ಪಿಸುವ ಕಾರ್ಯ ಮಾಡಿದೆ.


ಮಾರುಕಟ್ಟೆಗೆ ಬರುವ ಹೊಸ ಶೈಲಿಯ ಚಿನ್ನಾಭರಣಗಳನ್ನು ಧರಿಸಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಆಸೆ ಈಗಿನ ಮಹಿಳೆಯರಿಗಿದ್ದರೂ ಇದು ಅಷ್ಟು ಸುಲಭದ ಮಾತಲ್ಲ. ವಿವಿಧ ಸಾಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಮುಳಿಯ ಜ್ಯುವೆಲ್ಸ್ ಈಗ ಇಂತಹ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿದೆ. ಮೋಡೆಲಿಂಗ್ ಜಗತ್ತಿನ ಕಡೆಗೆ ಹೋಗ ಬಯಸುವ ಯುವತಿಯರಿಗೆ ಫೇಸಸ್ ಆಫ್ ಮುಳಿಯ ಎಂಬ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.


ಮುಳಿಯ ಶಾಖೆಗಳಿರುವ ಕೊಡಗು, ಪುತ್ತೂರು, ಬೆಳ್ತಂಗಡಿ, ಬೆಂಗಳೂರು ಸುತ್ತಮುತ್ತ ಇರುವ ಮೋಡೆಲಿಂಗ್ ಆಸಕ್ತ ರೂಪಸಿಯರನ್ನು ಆಯ್ಕೆ ಮಾಡಿ, ಅವರಿಗೆ ವೈವಿಧ್ಯಮಯ ಆಭರಣಗಳನ್ನು ತೊಡಿಸಿ ವೃತ್ತಿಪರ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಶೂಟಿಂಗ್ ಮಾಡಿ ಅದರಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿ ಮುಳಿಯ ಮೋಡೆಲ್‌ಗಳಾಗಿ ಪರಿಚಯಿಸುವ ಮೂಲಕ ಮೋಡೆಲಿಂಗ್ ಉದ್ಯಮದಲ್ಲಿ ಅವರನ್ನು ಬೆಳೆಸುವುದು ಉದ್ದೇಶವಾಗಿದೆ.


ಸಾವಿರಾರು ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಅದರಲ್ಲಿ 150 ಜನರನ್ನು ಈಗಾಗಲೇ ಆಯ್ಕೆ ಮಾಡಿ ಅವರ ಪ್ರೊಫೈಲ್ ಶೂಟ್ ಮಾಡಲಾಗಿದೆ. ಅವು ಮುಳಿಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಜನ ಮೆಚ್ಚುಗೆ ಪಡೆದಿವೆ. ಇದರಲ್ಲಿ ಆಯ್ಕೆಯಾದ 15-20 ಮೋಡೆಲ್‌ಗಳನ್ನು ಸಿನಿಮಾ ಪತ್ರಿಕೆಗಳ ಮೂಲಕ, ಜಾಹೀರಾತು ಮೂಲಕ, ಮುಳಿಯ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯಿಸಲಾಗುವುದು.


ಫೇಸಸ್ ಆಫ್ ಮುಳಿಯ ಒಂದು ವಿನೂತನ ಪ್ರಯೋಗವಾಗಿದ್ದು ಮಹಿಳೆಯರ ಸೌಂದರ್ಯ ಪ್ರಜ್ಞೆಯನ್ನು ಆಭರಣಗಳೊಂದಿಗೆ ಸಂಭ್ರಮಿಸುವ ಉದ್ದೇಶದ್ದಾಗಿದೆ. ಈಗಾಗಲೇ ಜನಪ್ರಿಯವಾಗಿರುವ ಕಾರ್ಯಕ್ರಮ ಮುಂದಿನ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮುಳಿಯ ಮಳಿಗೆಯಲ್ಲಿ ನಡೆಯುವ ಡೈಮಂಡ್ ಫೆಸ್ಟ್ ಮತ್ತು ಚಿನ್ನೋತ್ಸವದಲ್ಲಿ ಫೇಸಸ್ ಆಫ್ ಮುಳಿಯದಲ್ಲಿ ಆಯ್ಕೆಯಾದವರನ್ನು ಆಹ್ವಾನಿಸಿ ಫ್ಯಾಷನ್ ಶೋ ನಡೆಯಲಿದೆ.


ಸಮಾಜಮುಖಿ ಕಾರ್ಯಗಳು
ಮುಳಿಯ ಚಿನ್ನಾಭರಣ ಮಳಿಗೆ ಕಳೆದ 80 ವರ್ಷಗಳಿಂದ ನಂಬಿಕೆಯ ಆಭರಣ ಮಳಿಗೆಯಾಗಿರುತ್ತದೆ. ಸ್ಥಳೀಯರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗಾನರಥ ಗಾಯನ ಸ್ಪರ್ಧೆ, ಕೃಷಿಯನ್ನು ಉದ್ಯಮವಾಗಿ ನೋಡಬೇಕೆಂದು ಕೃಷಿಕೋದ್ಯಮ ಸೆಮಿನಾರ್, ಕಾಡು ಬೆಳೆಸಲು ಲಕ್ಷಕ್ಕೂ ಮಿಕ್ಕಿ ಸೀಡ್‌ಬಾಲ್ ಎಸೆತ, ದೇಶದಲ್ಲೇ ಮೊದಲ ಬಾರಿ ಸ್ವಚ್ಛ ಪುತ್ತೂರು ಕಾರ್ಯಕ್ರಮ ಹೀಗೆ ಸದಾ ಹಲವು ಹೊಸತನವನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ಹೊಸತನಕ್ಕೆ ಈಗ ಇನ್ನೊಂದು ಆಯಾಮವೇ ಫೇಸಸ್ ಆಫ್ ಮುಳಿಯ.


ಆಡಿಷನ್ ಪ್ರಕ್ರಿಯೆ:
ಫೇಸಸ್ ಆಫ್ ಮುಳಿಯ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ 800ಕ್ಕೂ ಅಧಿಕ ಅರ್ಜಿಗಳು ಬಂದಿದೆ. ಇದರಲ್ಲಿ ಆಡಿಷನ್‌ಗೆ 150 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮಡಿಕೇರಿಯಲ್ಲಿ 1, ಪುತ್ತೂರು 4, ಬೆಂಗಳೂರು 1 ತಂಡಗಳ ಆಡಿಷನ್ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ನುರಿತ ತಜ್ಞರ ತಂಡ ಮುಳಿಯಕ್ಕೆ ಬೆಂಬಲವಾಗಿ ನಿಂತಿದೆ.

ಫೇಸಸ್ ಆಫ್ ಮುಳಿಯ ಮೋಡೆಲಿಂಗ್ ಕ್ಷೇತ್ರಕ್ಕೆ ಹೆಜ್ಜೆ ಇಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ.
| ಮಾನಸ ಮೋಡೆಲ್


ಮುಳಿಯದವರ ಫೇಸಸ್ ಆಫ್ ಮುಳಿಯ ಕಾರ್ಯಕ್ರಮ ನನಗೆ ಮೋಡೆಲಿಂಗ್ ಮಾಡುವ ಆತ್ಮವಿಶ್ವಾಸ ನೀಡಿದೆ.
| ಮಹಾಲಸ ಪೈ ರೂಪದರ್ಶಿ


ನನ್ನ ಮಗಳು ಫೇಸಸ್ ಆಫ್ ಮುಳಿಯ ಚಿನ್ನಾಭರಣಗಳೊಂದಿಗೆ ತುಂಬಾ ಚೆನ್ನಾಗಿ ಕಾಣುತ್ತಾಳೆ.
| ಅನುರಾಧ ಪುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net