7, 8ರಂದು ಮುಖಾಮುಖಿ ಸಭೆ

Published on

ಬಂಟ್ವಾಳ: ಐಎಫ್​ಎ ಸಂಸ್ಥೆ ತನ್ನ ಆರ್ಕೈವ್ಸ್​ ಮತ್ತು ಮ್ಯೂಸಿಯಂ ಕಾರ್ಯಕ್ರಮದಡಿಯಲ್ಲಿ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಸಹಯೋಗದೊಂದಿಗೆ ಐಎಫ್​ಎ&ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಸ್ಕಾಲರ್​ಲಿ ಆ್ಯಂಡ್​ ಕ್ರಿಯಟಿವ್​ ಪ್ರಾಜೆಕ್ಟ್​ಗಳಿಗಾಗಿ ಪ್ರಸ್ತಾವನೆಯ ಅರ್ಜಿಗಳನ್ನು ಆಹ್ವಾನಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮುಖಾಮುಖಿ ಸಭೆಗಳನ್ನು ಡಿಸೆಂಬರ್​ 7ಮತ್ತು 8ರಂದು ಬಿ.ಸಿ.ರೋಡು ಹಾಗೂ ಮಂಗಳೂರಿನಲ್ಲಿ ಆಯೋಜಿಸಿದೆ.

7ರಂದು ಸಂಜೆ 4.30ಕ್ಕೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮುಖಾಮುಖಿ ಸಭೆ ನಡೆಯಲಿದ್ದು, ಮಂಗಳೂರಿನ ಕೊಡಿಯಾಲ್​ ಗುತ್ತುವಿನ ಇಂಟ್ಯಾಕ್​ ಮಂಗಳೂರು ಚಾಪ್ಟರ್​ನಲ್ಲಿ 8ರಂದು ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದೆ.

ಪ್ರಾಜೆಕ್ಟ್​ ಕುರಿತಾಗಿ ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯದ ಸ್ಥಾಪಕರಾದ ಡಾ.ತುಕಾರಾಮ್​ ಪೂಜಾರಿ, ಐಎಫ್​ಎಯ ಪತ್ರಾಗಾರಗಳು ಮತ್ತು ವಸ್ತುಸಂಗ್ರಹಾಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ರಿತಿಕಾ ಮಿಶ್ರಾ, ಕಲಾಶಿಕ್ಷಣದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಟಿ.ಎನ್​ ಮಾರ್ಗದರ್ಶನ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net