ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲಿ

6
ಬೀಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಎ.ಆರ್. ಅಂಬಗಿ, ಮಹಾಂತೇಶ ಕಿತ್ತೂರ, ಬಿ.ಎಂ. ಬಸರಗಿ, ವಿ.ಸಿ. ಸಿಂದಗಿ ಇತರರಿದ್ದರು.
Published on

ಇಟಗಿ: ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಎ.ಆರ್. ಅಂಬಗಿ ಹೇಳಿದರು.

ಸಮೀಪದ ಬೀಡಿ ಗ್ರಾಮದ ಜ್ಞಾನೇಶ್ವರ ಮಂಗಲ ಕಾರ್ಯಾಲಯಲ್ಲಿ ಬೀಡಿ ವಲಯದ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣ ಇಲಾಖೆ, ಜಿಪಂ, ಖಾನಾಪುರ ಬಿಇಒ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯಲು ಶಿಕ್ಷಣ ಇಲಾಖೆ ಹಲವು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನೋಡಲ್ ಅಧಿಕಾರಿ ಮಹಾಂತೇಶ ಕಿತ್ತೂರ ಮಾತನಾಡಿದರು. ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೊಳಿ ಉಪನ್ಯಾಸ ನೀಡಿದರು. ಮುಖ್ಯಾಧ್ಯಾಪಕರಾದ ಬಿ.ಎಂ. ಬಸರಗಿ, ವಿ.ಸಿ. ಸಿಂದಗಿ, ಶಂಕರ ಕಮ್ಮಾರ, ವಿ.ಡಿ. ಪೂಜಾರ, ರುದ್ರಪ್ಪ ಚನ್ನನ್ನವರ, ಚನ್ನಮ್ಮ ಕೋಳಿ, ರವಿ ಕಡೆಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net