ಸಮಸ್ಯೆ, ಸವಾಲುಗಳನ್ನು ಸಹನೆಯಿಂದ ಎದುರಿಸಿ

budda
ಎನ್.ಆರ್.ಪುರದ ಬಸ್ತಿಮಠದಲ್ಲಿ ಶ್ರೀ ಲಕ್ಷ್ಮೀಸೇನಾ ಭಟ್ಟಾಚಾರ್ಯ ಸ್ವಾಮೀಜಿ ಪಾರ್ಶ್ವನಾಥ ಸ್ವಾಮಿಗೆ ಪೂಜೆ ಸಲ್ಲಿಸಿದರು.
Published on

ಎನ್.ಆರ್.ಪುರ: ಜೀವನದಲ್ಲಿ ಬರುವ ಸವಾಲು, ಸಮಸ್ಯೆಗಳನ್ನು ಸಹನೆಯಿಂದ ಎದುರಿಸಿ ಭಗವಂತನ ನಾಮಸ್ಮರಣೆ ಮಾಡುವುದರ ಮೂಲಕ ಮೋಕ್ಷ ಸಾಧಿಸಬೇಕು ಎಂದು ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಹೇಳಿದರು.

ಭಗವಾನ್ ಶ್ರೀ 108 ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣಾರ್ಥವಾಗಿ ಮುಕುಟ ಸಪ್ತಮಿ ಅಂಗವಾಗಿ ಬುಧವಾರ ಪಾರ್ಶ್ವನಾಥ ಸ್ವಾಮಿಗೆ ಮೋಕ್ಷ ಲಡ್ಡು ಸಮರ್ಪಿಸಿ ಆಶೀರ್ವಚನ ನೀಡಿ, ಭಗವಾನ್ ಪಾರ್ಶ್ವನಾಥ ಸ್ವಾಮಿಯು ಕಮಟನ ಉಪಸರ್ಗವಗಳನ್ನು ಜಯಿಸಿ ಮೋಕ್ಷ ಪಡೆದಂತೆ ಎಲ್ಲರೂ ಜೀವನದಲ್ಲಿ ಸಮಸ್ಯೆ, ಕಷ್ಟಗಳನ್ನು ಸಹನೆಯಿಂದ ಎದುರಿಸಬೇಕು. ಆಚಾಯಧ ಶಾಂತಿಸಾಗರ ಮಹಾರಾಜರ 99ನೇ ಜನ್ಮ ಜಯಂತಿಯೂ ಆಗಿದ್ದು, ತ್ಯಾಗಿ ಪರಂಪರೆಗೆ ಮುನ್ನುಡಿ ಬರೆದ ಮಹಾನ್ ಚೇತನರ ಸ್ಮರಣೆ ನಮ್ಮ ಆದ್ಯ ಕರ್ತವ್ಯ ಎಂದರು. ಮಠದ ಸಿಬ್ಬಂದಿ ಹಾಗೂ ಜೈನ ಸಮುದಾಯದ ಶ್ರಾವಕ, ಶ್ರಾವಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net