

ಗದಗ:
ವಚನ ಸಂಶೋಧಕ ಡಾ. ಫ. ಗು. ಹಳಕಟ್ಟಿ ಅವರ ಜನ್ಮ ದಿನ ನಿಮಿತ್ಯ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿರುವ ಡಾ. ಫ. ಗು. ಹಳಕಟ್ಟಿ ಟ್ರಸ್ಟ್ ವತಿಯಿಂದ ಪದವಿ ಕಾಲೇಜಿನ ವಿದ್ಯಾಥಿರ್ಗಳಿಗೆ ಜು.12 ರಂದು "ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗದ ಚೌಗುಲೆ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. "ವಚನ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ' ಕುರಿತು ಭಾಷಣ ಸ್ಪರ್ಧೆ ಜರುಗುವುದು. ಒಂದು ಕಾಲೇಜಿನಿಂದ ಇಬ್ಬರು ವಿದ್ಯಾಥಿರ್ಗಳಿಗೆ ಭಾಗವಹಿಸಲು ಅವಕಾಶ ಇದ್ದು ಸ್ಪಧಿರ್ಗಳು ಕಾಲೇಜಿನ ಪ್ರಾಚಾರ್ಯರಿಂದ ಅಧಿಕೃತ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ತರಬೇಕು ಎಂದು ಪಕ್ರಟಣೆ ತಿಳಿಸಿದೆ.