

ನರಗುಂದ: ವಚನ ಪಿತಾಮಹ ಫ.ಗು. ಹಳಕಟ್ಟಿಯವರು ಸಂಶೋಧಕರಾಗಿ ಸಾಹಿತ್ಯ ಮತ್ತು ಸಾಹಿತ್ಯ ಪ್ರಚಾರಕರಾಗಿ ಸೇವೆ ಸಲ್ಲಿಸಿ ಜನಮನದಲ್ಲಿ ನೆಲೆಯೂರಿದ್ದಾರೆ ಎಂದು ರಮೇಶ ಐನಾಪೂರ ಹೇಳಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿಮಠದಲ್ಲಿ ಹಮ್ಮಿಕೊಳ್ಳಲಾದ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಪಾರ ಕಾನೂನು ಜ್ಞಾನದಿಂದಾಗಿ ಪ್ರಸಿದ್ಧ ವಕೀಲರಾಗಿ ಕಾರ್ಯರ್ನಿಹಿಸಿದ ಹಳಕಟ್ಟಿಯವರು ವಿಧಾನ ಪರಿಷತ್ ಸದಸ್ಯರಾಗಿಯೂ ಶಾಸನಬದ್ದ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು ಪುಷ್ಟಿಗೊಳಿಸಲು ಹಾಗೂ ಸಮೃದ್ದವಾಗಿ ಕನ್ನಡ ಕಟ್ಟಲು ಅಜರಾಮರ ಕೆಲಸ ಮಾಡಿದರು ಎಂದು ತಿಳಿಸಿದರು.
ಮಹಾಂತೇಶ ಹಿರೇಮಠ ಮಾತನಾಡಿ, 1925ರಲ್ಲಿ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದ ಹಳಕಟ್ಟಿಯವರು, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. 1926 ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆಯನ್ನು 35 ವರ್ಷ ನಿರಂತರ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವಕರ್ನಾಟಕ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಭಾರತ ಸರ್ಕಾರ ಅವರಿಗೆ ರಾವ್‌ಬಹದ್ದೂರ ಎಂದು ಪದವಿ ನೀಡಿ ಗೌರವಿಸಿತ್ತು. 1926 ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಬಸವರಾಜ ಹಿರೇಮಠ, ಮೃತ್ಯುಂಜಯ ಹಿರೇಮಠ ಇತರರಿದ್ದರು.