ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿ

arkera glass
ಅರಕೇರಾ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಶಾಕಿರಣ ಯೋಜನೆಯಡಿ ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮುರಳೀಧರರಾವ್ ಕುಲ್ಕರ್ಣಿ, ನೇತ್ರ ತಜ್ಞ ವಾದಿರಾಜ, ಶಿಕ್ಷಕರಾದ ಚಂದಪ್ಪ, ಸಂಗಪ್ಪ, ಭಾಗ್ಯ, ಗೀತಾ ಇದ್ದರು.
Published on

ಅರಕೇರಾ: ದೃಷ್ಟಿ ದೋಷವುಳ್ಳವರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಮುರಳೀಧರರಾವ್ ಕುಲ್ಕರ್ಣಿ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಸಮುದಾಯ ಆರೋಗ್ಯ ಕೇಂದ್ರದಿಂದ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಕಣ್ಣಿನ ಸಮಸ್ಯೆ ಇರುವ 35 ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿ ಬುಧವಾರ ಮಾತನಾಡಿದರು.

ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಗಮನಹರಿಸಬೇಕು. ಮೊಬೈಲ್ ಗೀಳಿಗೆ ಬೀಳಬಾರದು. ಒಳ್ಳೆಯದಕ್ಕೆ ಮಾತ್ರ ತಂತ್ರಜ್ಞಾನ ಬಳಸಬೇಕು. ಹೆಚ್ಚು ಟಿವಿ, ಮೊಬೈಲ್‌ಗಳನ್ನು ವೀಕ್ಷಣೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ದೃಷ್ಟಿದೋಷ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ನೇತ್ರ ತಜ್ಞ ವಾದಿರಾಜ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಣ್ಣಿನ ಆರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಆಶಾಕಿರಣ ಎನ್ನುವ ಯೋಜನೆಯನ್ನು ಜಾರಿಗೊಳಿಸಿದೆ. ಎರಡ್ಮೂರು ತಿಂಗಳ ಹಿಂದೆ ಶಾಲೆಯ 432 ವಿದ್ಯಾರ್ಥಿಗಳು ನೇತ್ರ ತಪಾಸಣೆಗೆ ಒಳಪಟ್ಟಿದ್ದರು. ನ್ಯೂನತೆ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತಿದೆ ಎಂದರು. ಶಿಕ್ಷಕರಾದ ಚಂದಪ್ಪ, ಸಂಗಪ್ಪ, ಭಾಗ್ಯ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net