

ಮಹಾಲಿಂಗಪುರ: ಒಬ್ಬ ವ್ಯಕ್ತಿಯ ಕಣ್ಣುಗಳು ಆತನ ಆರೋಗ್ಯ ಸ್ಥಿತಿ ಬಿಂಬಿಸುತ್ತವೆ. ದೇಹ ಆರೋಗ್ಯಕರವಾಗಿದ್ದಲ್ಲಿ ಕಣ್ಣುಗಳು ಹೊಳೆಯುತ್ತಿರುತ್ತವೆ. ಹೊಳೆಯುವ ಕಣ್ಣುಗಳನ್ನು ಹೊಂದಲು ಉತ್ತಮ ಆರೋಗ್ಯ ಹೊಂದುವುದು ಅವಶ್ಯ ಎಂದು ರಬಕವಿ ಬ್ರಹ್ಮಾನಂದ ಮಠದ ಗರುಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಸ್ಥಳೀಯ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿ.ಎಂ. ಹುರಕಡ್ಲಿ ೌಂಡೇಷನ್, ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ, ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆ ಜಮಖಂಡಿ, ಎಸ್‌ಜಿಎಂ ನೇತ್ರ ಭಂಡಾರ, ದೃಷ್ಟಿ ಕೇಂದ್ರ ಮಹಾಲಿಂಗಪುರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಕಲುಷಿತಗೊಳ್ಳುತ್ತಿರುವ ವಾಯು, ಆಹಾರ, ನೀರು ಮುಂತಾದವುಗಳಿಂದ ಆರೋಗ್ಯ ರಕ್ಷಣೆ ಕಷ್ಟವಾಗುತ್ತಿದೆ. ವಾಹನಗಳ ಓಡಾಟ, ಟಿ.ವಿ., ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ತೊಂದರೆಯುಂಟಾಗುತ್ತಿದೆ. ದೃಷ್ಟಿ ದೋಷ ಬರುವುದನ್ನು ತಪ್ಪಿಸುತ್ತ ಕಣ್ಣಿನ ರಕ್ಷಣೆಗೆ ಮುಂದಾಗಬೇಕು ಎಂದರು.
ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಜನಸೇವೆಗೆ ಮುಂದಾಗಿರುವ ಹುರಕಡ್ಲಿ ೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.
ಹುರಕಡ್ಲಿ ಫೌಂಡೇಷನ್‌ನ ಚನಬಸು ಹುರಕಡ್ಲಿ, ಡಾ. ಸಂಜೀವ ಕುಲಕರ್ಣಿ ಮಾತನಾಡಿದರು.
ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಶರಣ ಮಲ್ಲೇಶಪ್ಪ ಕಟಗಿ ಇತರರಿದ್ದರು.
ಡಾ. ಸೌರಭ ಹಾಗೂ ಡಾ. ರಾಘವೇಂದ್ರ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಜನರ ಕಣ್ಣುಗಳ ತಪಾಸಣೆ ಮಾಡಲಾಯಿತು. 106 ಜನರಿಗೆ ಜಮಖಂಡಿಯ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ ಚಿಕಿತ್ಸೆಗೆ ಶಿಾರಸು ಮಾಡಲಾಯಿತು. ದೃಷ್ಟಿದೋಷವುಳ್ಳ 212 ಜನರಿಗೆ ಕನ್ನಡಕ ಉಚಿತ ನೀಡುವುದಾಗಿ ತಿಳಿಸಲಾಯಿತು.