ಕುಣಿಗಲ್: ಚಿನ್ನ, ವಜ್ರ, ವೈಡೂರ್ಯಗಳಿಗಿಂತ ಕಣ್ಣು ಅತ್ಯಮೂಲ್ಯವಾಗಿದೆ. ಹಾಗಾಗಿ ಕಣ್ಣಿನ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಚಿನ್ನಾಗರ ಗ್ರಾಪಂ ಅಧ್ಯೆ ಮಮತಾ ರಮೇಶ್ ಹೇಳಿದರು.
ತಾಲೂಕಿನ ಜಿನ್ನಾಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಚಿಗುರು ಫೌಂಡೇಷನ್ ಮತ್ತು ಶ್ರದ್ಧಾ ಐಕೇರ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆಭರಣಗಳಿಗಿಂತ ಹೆಚ್ಚಿನ ಮೌಲ್ಯ ಹೊಂದಿರುವ ಕಣ್ಣುಗಳನ್ನು ಜವಾಬ್ದಾರಿಯಿಂದ ಸಂರಸಿಕೊಳ್ಳಬೇಕು ಎಂದರು.
ಚಿಗುರು ಫೌಂಡೇಷನ್ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ ಜಗತ್ತಿನಲ್ಲಿ ವಿಜ್ಞಾನ ಬೆಳೆದಂತೆ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮನುಷ್ಯ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಈ ನಿಟ್ಟಿನಲ್ಲಿ ಚಿಗುರು ಪೌಂಡೇಷನ್ನಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಿಡಿಒ ನಂದೀಶ್ ಮಾತನಾಡಿ ಎಪ್ಪತ್ತರ ದಶಕದಲ್ಲಿ ಕನ್ನಡಕ ಧರಿಸುವುದು ಎಂದರೆ ವಯಸ್ಸಾಯಿತು ಎಂಬ ಅರ್ಥ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಸಾಮಾನ್ಯವಾಗಿದೆ. ಈ ಸ್ಥಿತಿಗೆ ಕಾರಣ ಅರ್ಥಮಾಡಿಕೊಂಡು ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಶಿಬಿರದಲ್ಲಿ 96 ಜನ ತಪಾಸಣೆಗೆ ಒಳಗಾಗಿದ್ದು, ಏಳು ಮಂದಿಗೆ ಶಸಚಿಕಿತ್ಸೆ ಮಾಡಲಾಯಿತು. ಶ್ರದ್ಧಾ ಐಕೇರ್ನ ಡಾ.ಕುಪ್ಪಸ್ವಾಮಿ, ಬಿಜೆಪಿ ಮುಖಂಡ ಸತೀಶ್ಗೌಡ, ಅರಣ್, ಪುಪ್ಪಲತಾ, ಗುಲ್ಜಾರ್ ಇದ್ದರು.