ಪಟಾಕಿ ಸಿಡಿದು ಕಣ್ಣುಗುಡ್ಡೆ ಛಿದ್ರ

Published on

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪಟಾಕಿ ಬೆಂಕಿ ತಗುಲಿ ಪ್ರಿಯದರ್ಶಿನಿ ಕಾಲನಿಯ ನಿವಾಸಿಯೊಬ್ಬರ ಬಲಗಣ್ಣಿಗೆ ಪೆಟ್ಟಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳಿಯಪ್ಪ (55) ಶಾಶ್ವತವಾಗಿ ಬಲಗಣ್ಣು ಕಳೆದುಕೊಂಡಿದ್ದಾರೆ. ಐದನೇ ದಿನದ ಗಣೇಶ ವಿರ್ಸಜನೆ ವೇಳೆ ಗಣೇಶ ಮೂರ್ತಿಯನ್ನು ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಪಟಾಕಿ ಬೆಂಕಿ ಹಾರಿ ಬಂದು ಬಲಗಣ್ಣಿಗೆ ಬಡಿದಿದೆ. ಕಣ್ಣು ಗುಡ್ಡೆ ಛಿದ್ರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net