ಬನ್ನೂರಿನಲ್ಲಿ ನೇತ್ರ ತಪಾಸಣೆ ಉಚಿತ ಶಿಬಿರ

14 bannur 1
Published on

ಬನ್ನೂರು : ಗ್ರಾಮದ ರೋಟರಿ ಸಂಸ್ಥೆ , ಲಯನ್ಸ್ ಕ್ಲಬ್ ಆಫ್ ಈರೋಡ್, ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಮಾಜಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ಕಣ್ಣಿನ ತಪಾಸಣಾ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ದೃಷ್ಟಿ ಪಡೆದು ಉತ್ತಮ ಜೀವನ ನಡೆಸಬೇಕು ಎಂದರು. ಕಣ್ಣಿನ ಪೊರೆ ಇರುವವರನ್ನು ಆಯ್ಕೆ ಮಾಡಿ, ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ, ಶಸ್ತ್ರ ಚಿಕಿತ್ಸೆ ಮಾಡಿಸಿ ನಂತರ ಸ್ವ ಸ್ಥಳಕ್ಕೆ ತಂದು ಬಿಡಲಾಗುವುದು ಎಂದು ತಿಳಿಸಿದರು. ವಿವಿಧ ಗ್ರಾಮದಿಂದ ಸುಮಾರು 170 ಜನರು ಆಗಮಿಸಿ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡರು. ಕೆ.ರಾಜೇಶ್‌ಕುಮಾರ್, ಡಾ.ಶಮೀಕ್ಷಾ ಮೋದಿ, ಡಾ.ಕಸ್ತೂರಿ ದಬೋಲೆ, ನಂಜುಂಡಸ್ವಾಮಿ, ಯಾಸೀನ್, ಮೂರ್ತಿ, ವನ್ಯಾ, ವಿರಾಟ್ ರಾಜ್‌ಪುರೋಹಿತ್, ಸಂತೋಷ್‌ಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net