

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆ ಆವರಣದಲ್ಲಿ ಭಾನುವಾರ ಎಚ್. ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್, ರೋಟರಿ ಮಿಡ್ ಟೌನ್ ಮತ್ತು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ 22ನೇ ತಿಂಗಳ ನೇತ್ರ ನಿರಂತರ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ಶಿಬಿರ ಉದ್ದೇಶಿಸಿ ಸಂಸ್ಥೆಯ ಸಂಯೋಜಕ ಜಗದೀಶ್ ಮಾತನಾಡಿ ದಿ.ಎಚ್. ಕೃಷ್ಣಸ್ವಾಮಿ ಅವರ ನಿಧನದ ನಂತರ ಅವರು ನೆರವೆರುಸುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಟ್ರಸ್ಟ್ ಮೂಲಕ ಪ್ರೇಮಲತಾ ಕೃಷ್ಣಸ್ವಾಮಿ ಕುಟುಂಬ ನೆರವೇರಿಸುತ್ತದೆ. ಪ್ರತಿ ತಿಂಗಳ ಎರಡನೇ ಭಾನುವಾರ ಬಡವರ, ಕೃಷಿಕರ ಹಾಗೂ ಹಿಂದುಳಿದ ವರ್ಗದವರಿಗಾಗಿ ನೇತ್ರ ನಿರಂತರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಶಿಬಿರದಲ್ಲಿ 94 ರೋಗಿಗಳು ತಪಾಸಣೆಗೆ ಒಳಪಟ್ಟರು. ಅದರಲ್ಲಿ 33 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ನೇತ್ರ ತಜ್ಞ ಡಾ. ಗೊರಂಗ್, ಸಂಯೋಜಕರಾದ ವಿಜಯ್ ಕುಮಾರ್, ರಾಜೇಶ್, ಸಂಸ್ಥೆಯ ವ್ಯವಸ್ಥಾಪಕ ರವೀಂದ್ರ, ಸಿಬ್ಬಂದಿ ಅರುಣ್, ಮೋಹನ್ ಇದ್ದರು.