ಓಪೆಕï ಆಸ್ಪತ್ರೆಯಲ್ಲಿ ನೇತ್ರ ಶಸö ಚಿಕಿತ್ಸಾ ಶಿಬಿರ ಕಣ್ಣುಗಳ ಸಂರಕ್ಷಣೆ ಮಾಡಿ: ಶಿಬಿರದ ಲಾಭವನ್ನು ಪಡೆಯಲು ಸೂಚನೆ-ಡಿಸಿ

Eye surgery treatment camp
Eye surgery treatment camp
Published on

ರಾಯಚೂರು  ಜಿ¯್ಲÉಯಲ್ಲಿ ವಿಪರೀತ ಉಷ್ಣಾಂಶವಿದ್ದು, ಎಲ್ಲರೂ ತಮ್ಮ ಕಣ್ಣುಗಳನ್ನು ಸಂರಕ್ಷಣೆ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಜನರು ಇಂತಹ ಶಿಬಿರದ ಲಾಭವನ್ನು ಪಡೆಯಬೇಕೆಂದು ಜಿಲ್ಲಾಽಕಾರಿ ನಿತೀಶ್ ಕೆ. ಅವರು ಸಲಹೆ ನೀಡಿದರು.

ನಗರದ ಓಪೆಕï ಆಸ್ಪತ್ರೆಯಲ್ಲಿ ಶನಿವಾರ ಜಿ¯್ಲÁಡಳಿತ, ಜಿ¯್ಲÁ ಪಂಚಾಯತï, ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಓಪೆಕï ಆಸ್ಪತ್ರೆ, ರಿಮ್ಸï ಆಸ್ಪತ್ರೆ, ಶ್ರೀ ವಿವೇಕಾನಂದ ಸೇವಾಶ್ರಮ, ಲಯನ್ಸ ಕ್ಲಬï ವತಿಯಿಂದ ಆಯೋಜನೆ ಮಾಡಲಾಗಿದ್ದ ಬೃಹತ್ ಉಚಿತ ಐಒಎಲï ನೇತ್ರ ಶಸö ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಬಿರದಲ್ಲಿ ನೇತ್ರ ಶಸö ಚಿಕಿತ್ಸಾ ಮಾಡಿಸಿಕೊಂಡವರು ವೈದ್ಯರು ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಓಪೆಕï ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ ಭಾರಿ ಬದಲಾವಣೆಯಾಗಿದ್ದು, ಈ ಕಾರ್ಯದಲ್ಲಿ ವೈದ್ಯರ ಪಾತ್ರವಿದೆ. ಆಸ್ಪತ್ರೆಯಿಂದ ಜಿ¯್ಲÉಯ ಜನರಿಗೆ ಉತ್ತಮ ಚಿಕಿತ್ಸೆ ಹಾಗೂ ಔಷಽ ಸೌಲಭ್ಯವನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಜಿ¯್ಲÉಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಬಜೆಟï‌ನಲ್ಲಿ ಘೋಷಣೆ ಮಾಡಲಾಗಿದ್ದು, ಕ್ಯಾನ್ಸರï ಆಸ್ಪತ್ರೆ ಸ್ಥಾಪನೆಗಾಗಿ ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನï ಜನರಿಗೆ ಚಿಕಿತ್ಸೆಯ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಡಿಎಚ್‌ಓ ಡಾ.ಸುರೇಂದ್ರ ಬಾಬು ಮಾತನಾಡಿ, ಜಿ¯್ಲÉಯಲ್ಲಿ ಸುಮಾರು ವರ್ಷಗಳಿಂದ ಕಣ್ಣೇನು ಚಿಕಿತ್ಸೆ ಕ್ಯಾಂಪುಗಳನ್ನು ಮಾಡುತ್ತಿದ್ದು, ಬಡ ಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವೈದ್ಯರು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಅಲ್ಲದೆ ಬಿಡಿ, ಸಿಗರೇಟï, ಪಾನ್ ಹಾಗೂ ಗುಟ್ಕಾ ದಿಂದ ಸಂಪೂರ್ಣ ದೂರ ಇರಬೇಕು. ದೂರ ಇದ್ದಲ್ಲಿ ಮಾತ್ರ ವೈದ್ಯರು ಮಾಡಿರುವ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ನಂತರ ನ್ಯೂಕ್ಲಿಯರ್ ಪವರ ಕಾರ್ಪೊರೇಷನï ಆ-Àï ಇಂಡಿಯಾ ಲಿಮಿಟೆಡï ಕೈಗಾ ವತಿಯಿಂದ ಲೈ-ï ಲೈನ್ ಯೋಜನೆಯಡಿ ಡಯಾಲಿಸಿಸ್ ಸಪೋರ್ಟ್ ಇನಿಶಿಯೇಟಿವ್ ಯಂತ್ರವನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಿಮ್ಸï ಆಸ್ಪತ್ರೆಯ ನಿರ್ದೇಶಕರಾದ ಡಾ.ರಮೇಶ, ಓಪೆಕ್ ಆಸ್ಪತ್ರೆಯ ವಿಶೇಷಾಽಕಾರಿ ಡಾ.ರಮೇಶ ಸಾಗರ್, ಜಿ¯್ಲÁ ಶಸö ಚಿಕಿತ್ಸಕರಾದ ಡಾ.ವಿಜಯಶಂಕರ, ಜಿ¯್ಲÁ ಸರ್ವೇಕ್ಷಣಾಽಕಾರಿ ಡಾ.ಗಣೇಶ, ಬೆಂಗಳೂರಿನ ವಿವೇಕಾನಂದ ಸೇವಾಶ್ರಮದ ಅಧ್ಯಕ್ಷರಾದ ವೆಂಕಟೇಶ, ಲಯ£್ಸï ಕ್ಲಬï ಅಧ್ಯಕ್ಷರಾದ ವಿಕೆ ದೇಸಾಯಿ ಸೇರಿದಂತೆ ವಿವಿಧ ವಿಭಾಗದ ವೈದ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net