ಶಿಬಿರಾರ್ಥಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಯಶಶ್ವಿ

16.2
ಹೊಳೆನರಸೀಪುರ ರಿಯೋ ಫ್ರೀ ಸ್ಕೂಲ್, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಬಂದವರಿಗೆ ಶುಭ ಹಾರೈಸಲಾಯಿತು.
Published on

ಹೊಳೆನರಸೀಪುರ: ಪಟ್ಟಣದ ರಿಯೋ ಪ್ರೀ ಸ್ಕೂಲ್, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ಈರೋಡು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕಣ್ಣಿನ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿ, 366 ಜನರು ಭಾಗವಹಿಸಿದ್ದರು.

ಇವರಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದ 60 ರೋಗಿಗಳನ್ನು ಉಚಿತವಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಸಿದ್ದರು. ಬುಧವಾರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆಗಮಿಸಿದ ಜನರಿಗೆ ಇಲ್ಲಿನ ರಿಯೋ ಪ್ರೀ ಸ್ಕೂಲ್‌ನಲ್ಲಿ ಸಿಹಿ ಹಂಚಿ ಮನೆಗೆ ಕಳುಹಿಸಿಕೊಡಲಾಯಿತು.

ಅರವಿಂದ್ ಆಸ್ಪತ್ರೆಯ ಡಾ.ವಿಜಯ್, ರಿಯೋ ಫ್ರೀಸ್ಕೂಲ್‌ನ ಸುಪ್ರೀತ್ ಪಾಸ್ವಾನ್, ಕರವೇ ತಾಲೂಕು ಯುವ ಘಟಕದ ಅಧ್ಯಕ್ಷ ಎಂ.ಪಿ.ನವೀನ್, ಡಿ.ಕೆ.ಕುಮಾರಯ್ಯ, ಡಿ.ಕೆ.ಗೋಕುಲಾಕ್ಷಿ, ಗೋಕುಲ್ ಸೆನ್, ಸಂತೋಷ್, ಮಂಜು, ರವಿ, ಸಾಗರ್, ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net