ಕಣ್ಣಿನ ಸುರಕ್ಷೆಯ ಕಾಳಜಿ ಅಗತ್ಯ

19 ALVANDI 01
ಅಳವಂಡಿ ಸಮೀಪದ ಹಟ್ಟಿ ಗ್ರಾಮದಲ್ಲಿ ಪಿಎಚ್‌ಸಿ ಕವಲೂರುವತಿಯಿಂದ ನೇತ್ರ ತಪಾಸಣಾ ಶಿಬಿರ ನಡೆಯಿತು. ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ಕಾಶಪ್ಪ ಹಳ್ಳಿ, ಗವಿಸಿದ್ದಪ್ಪ ಗೊಂದಿಹೊಸಳ್ಳಿ, ವಸಂತ ಗದ್ದಿಕೇರಿ, ಆರೋಗ್ಯ ಸುರಕ್ಷತಾಧಿಕಾರಿಗಳಾದ ಯಲ್ಲಮ್ಮ, ಆಸ್ಮಾ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ, ನಾಗಮ್ಮ, ಕಮಲಾ, ಆಶಾಗಳಾದ ಉಮಾ, ಜೈತುಂಬಿ, ಅನ್ನಪೂರ್ಣ ಇತರರಿದ್ದರು.
Published on

ಅಳವಂಡಿ: ಕಣ್ಣು ದೇಹದ ಪ್ರಮುಖ ಅಂಗ. ಇದರ ಸುರಕ್ಷತೆಯ ಬಗ್ಗೆ ಕಾಳಜಿ ಅತಿ ಅವಶ್ಯ ಎಂದು ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ತಿಳಿಸಿದರು.

ಸಮೀಪದ ಹಟ್ಟಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರು ವತಿಯಿಂದ ವಿಶ್ವ ದೃಷ್ಟಿ ದಿನದ ಅಂಗವಾಗಿ ಆಯೋಜಿಸಿದ್ದ ನೇತ್ರ ತಪಾಸಣೆ ಶಿಬಿರವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣು ಕೂಡ ಒಂದು. ಮಾನವನ ದೇಹದಲ್ಲಿ ಕಣ್ಣಿನ ರಚನೆ ಅತ್ಯಂತ ಸೂಕ್ಷ್ಮವಾಗಿದೆ. ಕಾರಣ ಕಣ್ಣನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು ಮತ್ತು ಕಣ್ಣನ್ನು ತಪಾಸಣೆ ಮಾಡಿಸುತ್ತಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net