ನೇತ್ರ ಸಮಸ್ಯೆ ನಿರ್ಲಕ್ಷ್ಯ ಸಲ್ಲ

Eye problems should not be ignored.
ಮುರುಡಿ ಗ್ರಾಮದಲ್ಲಿ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಹೇಶ ಕುಲಕರ್ಣಿ, ಪವನ ಚಲವಾದಿ, ಕುಮಾರ ಎಚ್., ಭೀಮಣ್ಣ ಮಲ್ಲಾಪೂರ, ಎಂ.ಎಲ್. ಸನಗಿನ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಕಣ್ಣು ದೇಹದ ಸೂಕ್ಷ್ಮ ಅಂಗವಾಗಿದ್ದು, ಯಾವುದೇ ತೊಂದರೆ ಕಾಣಿಸಿಕೊಂಡಾಗ ಸ್ವಯಂ ಚಿಕಿತ್ಸೆ ಪಡೆದುಕೊಳ್ಳದೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನೇತ್ರ ತಪಾಸಣಾ ಶಿಬಿರದ ಮುಖ್ಯ ಕಾರ್ಯನಿರ್ವಾಹಕ ಮಹೇಶ ಕುಲಕರ್ಣಿ ಹೇಳಿದರು.

ಮುರುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಎಲ್.ಜಿ. ಹಾವನೂರ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹಾಗೂ ರಾಜವೀರ ಮದಕರಿನಾಯಕ ಸೇವಾ ಸಮಿತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಹಾಗೂ ಶಸಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಜನರಲ್ಲಿ ಕಣ್ಣಿನ ಬಗ್ಗೆ ತಿಳಿವಳಿಕೆ ಮೂಡಿಸಲು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 140 ಜನರು ತಪಾಸಣೆಗೆ ಒಳಗಾಗಿದ್ದ್ದು, ಇದರಲ್ಲಿ 40 ಜನರಿಗೆ ಕಣ್ಣಿನ ಶಸ ಚಿಕಿತ್ಸೆ ಅವಶ್ಯವಿದೆ. ಅವರಿಗೆ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಅಸ್ಪತ್ರೆಗೆ ಉಚಿತ ಶಸಚಿಕಿತ್ಸೆಗೆ ಕಳುಹಿಸಲಾಗುತ್ತಿದೆ ಎಂದರು.

ನೇತ್ರ ತಪಾಸಕರಾದ ಪವನ ಚಲವಾದಿ, ಕುಮಾರ ಎಚ್., ಭೀಮಣ್ಣ ಮಲ್ಲಾಪೂರ, ಶಾಲೆಯ ಮುಖ್ಯಶಿಕ್ಷಕ ಎಂ.ಎಲ್. ಸನಗಿನ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಕೀರಪ್ಪ ತಳವಾರ, ರಾಮಣ್ಣ ನೀರಲಕೇರಿ, ಮುದಕಪ್ಪ ಗೌಡ್ರ, ಬಸವರಾಜ ದಳವಾಯಿ, ಭೀಮಪ್ಪ ಗೌಡರ, ಶಿಕ್ಷಕರಾದ ದೇವನಾಯಕ ನಾಯಕರ, ಯಲ್ಲಮ್ಮ ಕೆಂಪಣ್ಣವರ, ಶಾಬೀರಾ ಮುಜಾವರ, ರತ್ನಾ ರಂಗರೇಜಿ, ಶೈಲಜಾ ಹವಾಲ್ದಾರ, ಆನಂದ ಲತ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net