ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ: ಡಾ.ರಾಧಿಕಾ ಅನಿಸಿಕೆ

eye camp
ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ನೇತ್ರ ರೋಗಿಗಳನ್ನು ನೇತ್ರತಜ್ಞೆ ಡಾ.ಶಿವಾಂಗಿ ತಪಾಸಣೆ ಮಾಡಿದರು.
Published on

ಕಂಪ್ಲಿ: ಕಣ್ಣುಗಳ ಆರೋಗ್ಯ ಕುರಿತು ಉದಾಸೀನ ಮಾಡದೇ ಸಕಾಲದಲ್ಲಿ ಪರೀಕ್ಷೆ ಮಾಡಿಸಿ ಚಕಿತ್ಸೆ ಪಡೆದುಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಧಿಕಾ ಹೇಳಿದರು.

ಶಿಬಿರದಿಂದ ಹಲವರಿಗೆ ಲಾಭ

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇರೆ ಯಾವುದೇ ಅಂಗವಿಲ್ಲದಿದ್ದರೆ ಜೀವನ ನಡೆಸಬಹುದು. ಆದರೆ ಕಣ್ಣು ಇಲ್ಲದಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಮಂದಾಗಬೇಕು ಎಂದರು.

ಶಿಬಿರದಲ್ಲಿ 150 ಜನರ ಕಣ್ಣಿನ ಪರೀಕ್ಷೆ ಮಾಡಲಾಯಿತು. ಇದರಲ್ಲಿ 96 ರೋಗಿಗಳನ್ನು ನೇತ್ರ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ನೇತ್ರತಜ್ಞೆ ಡಾ.ಶಿವಾಂಗಿ ಪ್ರತಿಯೊಬ್ಬರ ಕಣ್ಣುಗಳನ್ನು ಪರೀಕ್ಷಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಎಂ.ಕೃಷ್ಣ, ಶಂಕರ್, ಶಿವಪ್ರಸಾದ್, ಕುಮುದಾ, ಸುಪ್ರಿಯಾ ಶ್ವೇತಾ, ಶಶಿಕಲಾ ಸೇರಿ ಆಶಾ ಕಾರ್ಯಕರ್ತೆ ಚಂದ್ರಲೇಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net